ನಲ್ವತ್ತೋಕ್ಲಿನಲ್ಲಿ ಈದ್ ಮಿಲಾದ್

07 gkp 06
Published on

ಗೋಣಿಕೊಪ್ಪ: ಮೊಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಮತ್ತು ಬುಸ್ತಾನುಲ್ ಉಲೂಂ ಮದರಸ ವತಿಯಿಂದ ಈದ್ ಮಿಲಾದ್ ಅನ್ನು ಇತ್ತೀಚೆಗೆ ಆಚರಿಸಲಾಯಿತು.
ಮಸೀದಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ದುದ್ಧಿಯಂಡ ಎಚ್.ಸೂಫಿ ಹಾಜಿ, ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳ ಕುರಿತು ಪ್ರತಿಯೊಬ್ಬರೂ ಅರಿಯಬೇಕು. ಪ್ರವಾದಿಯ ತತ್ವ-ಬೋಧನೆ ಸಮಾಜದಲ್ಲಿ ಭಾವೈಕ್ಯತೆ ಮತ್ತು ಸಾಮರಸ್ಯ ಮೂಡಿಸಲು ನೆರವಾಗುತ್ತದೆ ಎಂದು ಹೇಳಿದರು.


ಮದರಸಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮುಖ್ಯರಸ್ತೆಯಲ್ಲಿ ಜಾಥ ನಡೆಸಿದರು. ನಂತರ ಬುಸ್ತಾನುಲ್ ಉಲೂಂ ಮದರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಕಾರ್ಯಕ್ರಮದಲ್ಲಿ ಸಯ್ಯದ್ ಮಹದಿ ತಂಗಳ್, ಮುಬಶೀರ್ ಅಹ್ಸನಿ, ಸದರ್ ಉಸ್ತಾದ್ ಸಫ್ವಾನ್ ಸಖಾಫಿ, ಹಂಸ ಮುಸ್ಲಿಯಾರ್, ಸೌಕತ್ ಮುಸ್ಲಿಯಾರ್, ಸಾಹಿರ್ ಮುಸ್ಲಿಯಾರ್, ಡಿ.ಎಫ್. ಅಶ್ರಫ್, ಡಿ.ಎಂ. ಯೂಸುಫ್, ಪಿ.ಎ. ಬಶೀರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net