ಜಿಲ್ಲೆಯ ವಿವಿಧೆಡೆ ಈದ್ ಮೀಲಾದ್ ಆಚರಣೆ

9adarshkdga5
Published on

ಮಡಿಕೇರಿ: ಪ್ರವಾದಿ ಮಹಮದ್ ಪೈಗಂಬರರ ಜನ್ಮ ದಿನಾಚರಣೆಯನ್ನು ಮುಸ್ಲಿಂ ಬಾಂಧವರು ಭಾನುವಾರ ಜಿಲ್ಲೆಯಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು.


ಭಾನುವಾರ ಬೆಳಗ್ಗೆ ಮುಸ್ಲಿಂ ಬಾಂಧವರು ಮಹಮದ್ ಪೈಗಂಬರರ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ನಂತರ ಮಸೀದಿಗಳಿಗೆ ತೆರಳಿದ ಮುಸ್ಲಿಂ ಬಾಂಧವರು, ಸುಖ, ಶಾಂತಿ, ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಪ್ರಯುಕ್ತ ಮಸೀದಿಗಳಲ್ಲಿ ವಿಶೇಷ ಪ್ರವಚನಗಳು ನಡೆದವು. ಈದ್ ಮಿಲಾದ್ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂಬಾಂಧವರ ದ್ವಜಗಳು ರಾರಾಜಿಸುತ್ತಿದ್ದ ಚಿತ್ರಣ ಕಂಡುಬಂತು.


ನಗರದ ಕಾವೇರಿ ಹಾಲ್‌ನಲ್ಲಿ ಭಾನುವಾರ ಬದ್ರಿಯಾ ಮತ್ತು ಜಾಮಿಅ ಜಮಾಅತ್ತಿನ ಸಂಯುಕ್ತಾಶ್ರಯದಲ್ಲಿ ಗ್ರ್ಯಾಂಡ್ ಮೀಲಾದ್ ಫೆಸ್ಟ್ ಆಯೋಜಿಸಲಾಗಿತ್ತು. ವಕೀಲ ಹಾಗೂ ಸಾಹಿತಿ ಕೆ.ಪಿ.ಸುಬ್ರಮಣ್ಯ, ಬದ್ರಿಯಾ ಮತ್ತು ಜಾಮಿಅ ಜಮಾಅತ್ತಿನ ಅಧ್ಯಕ್ಷ ಅಮೀನ್ ಮೊಹ್ಸಿನ್, ಜಮಾಅತ್ ಕಾರ್ಯದರ್ಶಿ ಎಂ.ಎಂ.ಹಾರೂನ್, ಪ್ರಮುಖರಾದ ಇಮ್ರಾನ್, ಫಜ್ಲರಹ್ಮಾನ್ ಸಖಾಫಿ, ಹಾಫಿಲ್ ಉಬೈದುರಹ್ಮಾನ್, ಜನಾಬ್ ಇಬ್ರಾಹಿಂ ಇತರರಿದ್ದರು. ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net