

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಹಮ್ಮದ್ ಪೈಗಂಬರ್ ಅವರ ೧೪೯೯ನೇ ಜನ್ಮದಿನವಾದ ಈದ್-ಮಿಲಾದ್ ಅನ್ನು ಮುಸ್ಲಿಂ ಸಮುದಾಯದವರು ಸಡಗರ ಸಂಭ್ರಮದಿAದ ಆಚರಿಸಿದರು. ನಗರದಲ್ಲಿ ಸಹಸ್ರಾರು ಮಂದಿ ಶಾಂತಿಯುತವಾಗಿ ಬೃಹತ್ ಮಿಲಾದ್ ರ‍್ಯಾಲಿ ನಡೆಸಿದರು.
ಅಂಡೇಛತ್ರದಿAದ ಆರಂಭವಾದ ಈದ್-ಮಿಲಾದ್ ಮೆರವಣಿಗೆ ಎಂ.ಜಿ.ಗೆ ರಸ್ತೆ, ಅಲ್ಲಿಂದ ಅಂಚೆಕಚೇರಿ ರಸ್ತೆ ಮೂಲಕ ತೊಗರಿಹಂಕಲ್ ವೃತ್ತವನ್ನು ಬಳಸಿ, ಐ.ಜಿ.ರಸ್ತೆಯಲ್ಲಿ ಸಾಗಿ ಹನುಮಂತಪ್ಪ ವೃತ್ತದ ಮೂಲಕ ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿ ಅಂಡೇಛತ್ರದಲ್ಲಿ ಮುಕ್ತಾಯಗೊಂಡಿತು.
ಸಾವಿರಾರು ಮಂದಿ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ರ‍್ಯಾಲಿಯನ್ನು ವೀಕ್ಷಿಸಿದರು.ಬಾಲಕರುಗಳು ಹಣೆಗೆ ಹಸಿರು ಪಟ್ಟಿಯನ್ನು ಕಟ್ಟಿಕೊಂಡು ಕೈಯಲ್ಲಿ ಹಸಿರುಧ್ವಜವನ್ನು ಹಿಡಿದು ಸಾಗಿದರು.
ಆಟೋಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಯುವಕರು ಶ್ವೇತಬಣ್ಣದ ವಸ್ತçಗಳನ್ನು ತೊಟ್ಟು ಉದ್ದನೆಯ ಪೈಪ್‌ಗಳಿಗೆ ಹಸಿರುಧ್ವಜವನ್ನು ಸಿಕ್ಕಿಸಿಕೊಂಡು ರಸ್ತೆಯುದ್ದಕ್ಕೂ ತಿರುಗಿಸುತ್ತಾ ಸಾಗಿದರು. ಇನ್ನೂ ಕೆಲವರು ಧ್ವನಿವರ್ಧಕದಲ್ಲಿ ಬರುತ್ತಿದ್ದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಧ್ವನಿವರ್ಧಕದಲ್ಲಿ ಬರುತ್ತಿದ್ದ ಗೀತೆಗಳಿಗೆ ಯುವಕರ ತಂಡ ದಫ್‌ಬಾರಿಸುತ್ತಾ ಮೆರವಣಿಗೆಯಲ್ಲಿ ಹೆಜ್ಜೆಹಾಕುತ್ತಿದ್ದ ದೃಶ್ಯಸಾಮಾನ್ಯವಾಗಿತ್ತು. ಚಿಕ್ಕಮಗುವೊಂದು ವಾಹನದ ಮೇಲೆ ಕುಳಿತು ಧರಿಸಿದ್ದ ಟಿಪ್ಪುಸುಲ್ತಾನ್ ವೇಷ ಸಾರ್ವಜನಿಕರ ಗಮನ ಸೆಳೆಯಿತು.
ಸತ್ಯವನ್ನು ಹೇಳು ಅದು ಕಹಿಯಾದರು ಸರಿ. ಜೀವಹೋದರು ಸರಿ ಸತ್ಯವನ್ನು ನುಡಿ ಎಂದ ಸತ್ಯವಂತ ನಾಯಕ ನಮ್ಮ ಪ್ರವಾದಿ ಎಂದು ಬರೆದಿರುವುದು ಕಂಡು ಬಂತು. ಒಟ್ಟಾರೆಯಾಗಿ ನಗರದಲ್ಲಿ ಸೋಮವಾರ ನಡೆದ ಈದ್-ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.