

ಸುಳ್ಯ: ತಾಲೂಕಿನಾದ್ಯಂತ ಈದ್ ಮಿಲಾದ್ ಹಬ್ಬ ಆಚರಿಸಲಾಯಿತು. ಮಸೀದಿಗಳ ಮುಂಭಾಗ ಮುಸ್ಲಿಮರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡು ಬಂತು.
ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ವತಿಯಿಂದ ಬುಸ್ತಾನುಲ್ ಉಲೂಂ ಮದರಸ ಜಟ್ಟಿಪಳ್ಳ, ಇದರ ಸುನ್ನಿ ಬಾಲ ಸಂಘ ಸಹಯೋಗದೊಂದಿಗೆ ಈದ್ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಿತು.
ಜಟ್ಟಿಪಳ್ಳ ಮಸೀದಿ ಆವರಣದಿಂದ ಆರಂಭಗೊಂಡು ಸುಳ್ಯ ಎಸ್‌ವಿಎಂ ಆಸ್ಪತ್ರೆ ಬಳಿಯಿಂದ ಶ್ರೀ ರಾಮ ಪೇಟೆಯಾಗಿ ಸುಳ್ಯ ನಗರದಲ್ಲಿ ಮುಖ್ಯ ಹೆದ್ದಾರಿಯಲ್ಲಿ ಸಾಗಿ ಗಾಂಧಿ ನಗರ ಪೆಟ್ರೋಲ್ ಪಂಪ್‌ವರೆಗೆ ಸಾಗಿ ನಂತರ ಗಾಂಧಿ ನಗರ ಮಸೀದಿಯ ಮುಂಬಾಗ ನಾವೂರು ರಸ್ತೆಯಾಗಿ ಜಟ್ಟಿಪಳ್ಳ ಕೊಡಿಯಾಲ ಬೈಲು ಡಿಗ್ರಿ ಕಾಲೇಜು ರಸ್ತೆಯಾಗಿ ಸಾಗಿ ಕೊನೆಗೆ ಜಟ್ಟಿಪಳ್ಳ ಮಸೀದಿಗೆ ಹಿಂದಿರುಗಿ ಕೊನೆಗೆ ಕಾಲ್ನಡಿಗೆ ಜಾಥಾ ಸಮಾಪನಗೊಂಡಿತು.
ಜಾಥಾದುದ್ದಕ್ಕೂ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಭಕ್ತಿ ಗೀತೆಗಳು, ಸ್ವಲಾತ್, ಗೀತೆಗಳು ಮೊಳಗಿದವು. ಕಾಲ್ನಡಿಗೆ ಜಾಥಾ ಸಾಗಿ ಹೋಗುವ ಸಂದರ್ಭದಲ್ಲಿ ಗಾಂಧಿ ನಗರ ಮಸೀದಿಯ ಮುಂಬಾಗ ತಂಪು ಪಾನಿಯ ವಿತರಿಸಿ ಸ್ವಾಗತಿಸಿದರು. ಸಾರ್ವಜನಿಕರು ಅಲ್ಲಲ್ಲಿ ತಿಂಡಿ ಪಾನೀಯಗಳನ್ನು ನೀಡಿ ಸಾರ್ವಜನಿಕರು ಪ್ರೀತಿಯಿಂದ ಸ್ವಾಗತಿಸಿದರು.