

ಉಳ್ಳಾಲ : ಪ್ರವಾದಿ(ಸ.ಅ) ಅವರ ತತ್ವ, ಸಿದ್ಧಾಂತ ಜೀವನದಲ್ಲಿ ಅಳವಡಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದೊಂದಿಗೆ ಸರ್ವರ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಅನ್ಯಾಯ ಮಾಡಿದವನನ್ನೂ ಕ್ಷಮಿಸಿದ ಅವರ ಸಿದ್ಧಾಂತ ಇಂದಿಗೂ ಪ್ರಸ್ತುತ. ಉಳ್ಳಾಲದಲ್ಲಿ ನಡೆದ ರ‌್ಯಾಲಿಯಲ್ಲಿ ಸರ್ವ ಧರ್ಮೀಯರು ಭಾಗವಹಿಸಿದ್ದು ಈ ಮೂಲಕ ಪರಸ್ಪರ ಪ್ರೀತಿ, ಸೌಹಾರ್ದ ಸಮಾಜ, ಬಲಿಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಉಳ್ಳಾಲ ಕೇಂದ್ರ ಜುಮಾ ಮಸೀದಿ(402) ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ಆಶ್ರಯದಲ್ಲಿ ಕೋಟೆಪುರ ಮಸೀದಿ ಆವರಣದಲ್ಲಿ ಈದ್ ಮೀಲಾದ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಮಾತನಾಡಿದರು. ಕೋಡಿ ಜುಮಾ ಮಸೀದಿ ಖತೀಬ್ ಇರ್ಷಾದ್ ಸಖಾಫಿ ದುವಾಗೈದರು. ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರಸಭಾ ಸದಸ್ಯ ಬಾಝಿಲ್ ಡಿಸೋಜ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಮಸೀದಿ ಖತೀಬ್ ಮೊಹಮ್ಮದ್ ಫೈಝಿ ಪಟ್ಲ, ಅರೆಬಿಕ್ ಕಾಲೇಜಿನ ಪ್ರಾಧ್ಯಾಪಕರಾದ ಇಬ್ರಾಹಿಂ ಅಹ್ಸನಿ, ನೌಮಾನ್ ನೂರಾನಿ, ನಜೀಮ್ ನೂರಾನಿ ಮಾಜಿ ಉಪಾಧ್ಯಕ್ಷ ಇಸ್ಮಾಯಿಲ್ ಮೋನು, ಮಾಜಿ ಅಧ್ಯಕ್ಷ ಯು.ಎಸ್.ಹಂಝ, ಸದಸ್ಯರಾದ ಅಬ್ದುಲ್ ಖಾದರ್, ಝೈನುದ್ದೀನ್ ಮೇಲಂಗಡಿ, ಇಸ್ಹಾಕ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು. ವಿವಿಧ ಮದ್ರಸಾಗಳ ವಿದ್ಯಾರ್ಥಿಗಳು ಉಳ್ಳಾಲ ದರ್ಗಾ ವಠಾರದಲ್ಲಿ ದಫ್ ಪ್ರದರ್ಶನ ನೀಡಿದರು.
ಪ್ರವಾದಿ ಯಾವುದೇ ಬೇಧ, ಭಾವವಿಲ್ಲದೆ ಸರ್ವ ಧರ್ಮೀಯರನ್ನು ಒಂದೇ ದೃಷ್ಟಿಕೋನದಿಂದ ಕಂಡವರು. ನಾವಿಂದು ಸಾಮಾಜಿಕ ಜಾಲತಾಣದಲ್ಲಿ ನಿಂದನೆ, ಸುಳ್ಳು ಹೇಳುವುದನ್ನು ತೊರೆದು ಪ್ರವಾದಿ(ಸ.ಅ) ಅವರ ಚರ್ಯೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಉಳ್ಳಾಲದಲ್ಲಿ ನಡೆದ ರ‌್ಯಾಲಿ ನಿಯಂತ್ರಿಸಲು ಸ್ವಯಂಸೇವಕರು ಇಲ್ಲದಿದ್ದರೂ ಶಿಸ್ತುಬದ್ಧವಾಗಿ ನಡೆದಿದೆ. ಬಿ.ಜಿ.ಹನೀಫ್, ದರ್ಗಾ ಅಧ್ಯಕ್ಷ https://www.vijayavani.net/teachers-day-17