

ಸಿದ್ದಾಪುರ: ಪಟ್ಟಣದಲ್ಲಿ ಗುರುವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿನ ಮುನವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು. ಎಂ ಮುಸ್ತಫಾ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮದರಸ ವಿದ್ಯಾರ್ಥಿಗಳು ಮೌಲುದ್ ಪಾರಾಯಣ, ದಫ್ ಪ್ರದರ್ಶನ, ಮಜ್ಲಿಸ್, ಖವಾಲಿ, ಗಾಯನ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಸೀದಿ ಖತೀಬ್ ನೌಫಲ್ ಉದವಿ, ಮುಸ್ಲಿಂ ಜಮಾಆತ್ ಕಮಿಟಿ ಪ್ರಮುಖರಾದ ರೌವೂಫ್ ಹಾಜಿ, ಅಸ್ಕರ್, ಅಬ್ದುಲ್ ಕರೀಂ, ನವಾಜ್, ಮಜೀದ್,ಅಲಿ, ಸಮೀರ್, ಮಿಲಾದ್‌ಆಚರಣೆ ಸಮಿತಿ ಅಧ್ಯಕ್ಷ ವಿ.ಕೆ ಬಸಿರ್, ಮದರಸ ಮುಖ್ಯ ಶಿಕ್ಷಕ ಅರೀಫ್ ಪೈಝಿ ಹಾಜರಿದ್ದರು .
ಬೃಹತ್ ಮೆರವಣಿಗೆ: ಶುಕ್ರವಾರ ಸಂಜೆ 4 ಗಂಟೆಗೆ ಸಿದ್ದಾಪುರ ಸುತ್ತಮುತ್ತಲ ಮಹಲ್ಗಳಾದ ನೆಲ್ಯಹುದಿಕೇರಿ , ಗುಹ್ಯ, ಅರೇಕಾಡು, ಒಂಟಿಯಂಗಡಿ, ಬಜಕೊಲ್ಲಿ, ಮಟ್ಟಂ, ನೆಲ್ವತ್ರೇಕ್ರೆ, ಇಂಜಲಗೆರೆ, ಸಿದ್ದಾಪುರ ಮಹಲ್ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದಿಂದ ನೆಲ್ಯಹುದಿಕೇರಿವರೆಗೆ ಬೃಹತ್ ಮಿಲಾದ್‌ಸಂದೇಶ ಜಾಥಾ ನಡೆಯಲಿದೆ