ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ದಾಳಿ : ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

vvv
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ನಗರದ ಗಾಂಧಿಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು.
Published on

ವಿಜಯಪುರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ನಗರದ ಗಾಂಧಿಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ಸಿದ್ದರಾಮಯ್ಯ ಅವರು ಕೊಡಗಿನಲ್ಲಿ ಅತಿವೃಷ್ಠಿಯಿಂದ ತೊಂದರೆಗೀಡಾದ ಕುಟುಂಬದವರನ್ನು ಭೇಟಿಯಾಗಿ ಅಲ್ಲಿಯ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ವೀಕ್ಷಣೆಗೆ ಹೋದಾಗ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ತೀವ್ರವಾಗಿ ಖಂಡಿಸಿದರು. ಇಂತಹ ಹೀನ ಸಂಸ್ಕೃತಿಯನ್ನು ಬಿಜೆಪಿ ಪಕ್ಷದವರು ಬಿಡಬೇಕು, ಇಲ್ಲವಾದರೆ ಸರ್ಕಾರದ ಯಾವೊಬ್ಬ ಸಚಿವರು ತಿರುಗಾಡದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅದರಂತೆ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿರುವುದು ಇದು ಹೇಡಿಗಳು ಮಾಡುವ ಕೃತ್ಯ. ರಾಜ್ಯದಲ್ಲಿ ಶೂನ್ಯ ಅಭಿವೃದ್ಧಿಯನ್ನು ಮರೆಮಾಚುವುದಲ್ಲದೆ ಭ್ರಷ್ಟಾಚಾರದಿಂದ ಕೂಡಿದ ಬಿಜೆಪಿ ಸರ್ಕಾರದ ಹುಳುಕನ್ನು ಕಾಂಗ್ರೆಸ್ ಪಕ್ಷವು ಎಲ್ಲಿ ಬಯಲಿಗೆಳೆಯುತ್ತದೆಯೋ ಎಂಬ ಭಯದಿಂದ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯುವುದು ಬಿಜೆಪಿಯ ತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ಮುಖಂಡರಾದ ಕಾಂತಾ ನಾಯಕ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸಂಗನಗೌಡ ಹರನಾಳ, ಮಹ್ಮದರಫೀಕ ಟಪಾಲ, ಎಸ್.ಎಂ. ಪಾಟೀಲ ಗಣಿಹಾರ, ಡಾ.ರವಿಕುಮಾರ ಬಿರಾದಾರ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ವಿದ್ಯಾರಾಣಿ ತುಂಗಳ, ಡಾ.ಗಂಗಾಧರ ಸಂಬಣ್ಣಿ, ಶಂಕರಸಿಂಗ ಹಜೇರಿ, ಜಕ್ಕಪ್ಪ ಯಡವೆ, ಎಂ.ಜಿ.ಯಂಕಂಚಿ, ಶಬ್ಬೀರ ಜಾಗೀರದಾರ, ಹೊನಮಲ್ ಸಾರವಾಡ, ವಸಂತ ಹೊನಮೊಡೆ, ಸಾಹೇಬಗೌಡ ಎನ್. ಬಿರಾದಾರ, ಐ.ಎಂ. ಇಂಡಿಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net