ಕೆರೆಯನ್ನು ಉತ್ತಮ ಪ್ರವಾಸಿ ತಾಣ ಮಾಡಲು ಶ್ರಮಿಸುವೆ

kladg 22 jet
ಕಲಾದಗಿ ಸಮೀಪದ ಕಳಸಕೊಪ್ಪ ಕೆರೆಗೆ ಶಾಸಕ ಜೆ.ಟಿ. ಪಾಟೀಲ ಬಾಗಿನ ಅರ್ಪಿಸಿದರು. ಮುಖಂಡರಾದ ಸಂಗಣ್ಣ ಮುಧೋಳ, ಎಂ.ಬಿ.ಸೌದಾಗರ, ಬಸವರಾಜ ಸಂಶಿ ಇತರರಿದ್ದರು.
Published on

ಕಲಾದಗಿ: ಕಳಸಕೊಪ್ಪ ಕೆರೆಯ ರಮಣೀಯ ಪರಿಸರ ಹೊಂದುವ ಮೂಲಕ ಜಿಲೆಯಲ್ಲೇ ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಲಕ್ಷಣ ಹೊಂದಿದ್ದು, ಪ್ರವಾಸಿತಾಣವನ್ನಾಗಿಸುವ ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ಶಾಸಕ ಜೆ.ಟಿ. ಪಾಟೀಲ ಭರವಸೆ ನೀಡಿದರು.

ಸಮೀಪದ ರೈತರ ಜೀವನಾಡಿ, ಜಿಲ್ಲೆಯ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯ ಕಳಸಕೊಪ್ಪ ಕೆರೆಗೆ ಮಂಗಳವಾರ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದರು.

ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಈ ಕುರಿತು ಮಾತನಾಡಿದ್ದಲ್ಲದೆ, ಕೆರೆಗೆ ಭೇಟಿ ನೀಡಲು ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

ಮಳೆರಾಯನ ಕೃಪೆಯಿಂದ ಘಟಪ್ರಭೆಗೆ ನೀರು ಬಂದು ಜಾಕ್‌ವೆಲ್‌ನಿಂದ ನೀರು ಹರಿಸಿದ್ದರಿಂದ ಅವಧಿಗೆ ಮುನ್ನವೇ ಕಳಸಕೊಪ್ಪ ಕೆರೆ ತುಂಬಿರುವುದು ಹಾಗೂ ಬಹಳ ವರ್ಷಗಳ ನಂತರ ಕೋಡಿ ಹರಿದಿರುವುದು ಖಷಿಯ ಸಂಗತಿ. ಶ್ರಮವಹಿಸಿ ಕೆರೆಗೆ ತುಂಬಿಸಿರುವ ನೀರು ವ್ಯರ್ಥ ಮಾಡಿಕೊಳ್ಳದೆ ನೀರಾವರಿಗೆ ಬಳಸಿಕೊಳ್ಳಬೇಕು ಎಂದರು.

ಕೆರೆಯ ಅಭಿವೃದ್ಧಿ ಹಾಗೂ ಹಾಳಾಗಿರುವ ಕಾಲುವೆಯ ವಿವಿಧ ಭಾಗಗಳನ್ನು ದುರಸ್ತಿಗೊಳಿಸಲು ಸರ್ಕಾರದಿಂದ 190 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕಲಾದಗಿ ಗ್ರಾಪಂ ಉಪಾಧ್ಯಕ್ಷ ಪಕೀರಪ್ಪ ಮಾದರ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಡಾ.ಎಸ್.ಎಚ್. ತೆಕ್ಕೆಣ್ಣವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ, ಮುಖಂಡರಾದ ಎಂ.ಬಿ. ಸೌದಾಗರ, ಸಂಗಣ್ಣ ಮುಧೋಳ, ಪಾಂಡುಪೊಲೀಸ್, ಬಸವರಾಜ ಗೊಡಚಿ, ಚನ್ನಬಸಯ್ಯ ಚಿಕ್ಕೂರಮಠ, ನಾರಾಯಣ ಹಾದಿಮನಿ, ಪಕೀರಪ್ಪ ಬಿಸಾಳೆ, ಭೀಮನಗೌಡ ಗೌಡರ, ಮಂಜುಗೌಡ ಗೌಡರ, ಹನುಮಂತಗೌಡ ಗೌಡರ, ಗೂಳಪ್ಪ ಹೊರಟ್ಟಿ, ಹೊಳೆಬಸಪ್ಪ ಬೂದಿಹಾಳ, ಗಂಗಯ್ಯ ಸರ್ಕರ, ಮುರಿಗೆಪ್ಪ ಕೌಜಲಗಿ, ಬಸವರಾಜ ಬಿಲಕೇರಿ, ಭೀಮಸಿ ಪೂಜಾರ, ಸಣ್ಣ ನೀರಾವರಿ ಇಲಾಖೆ ಎಇ ಪ್ರಕಾಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net