

ಗುಳೇದಗುಡ್ಡ: ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯವಾಗಬೇಕು. ನ್ಯಾಯಾಲಯದ ಕಟ್ಟಡ ನಿರ್ಮಿಸಲು ಶ್ರಮಿಸುತ್ತೇನೆ. ಅಲ್ಲದೆ ಸಂಬಂಧಪಟ್ಟ ಇಲಾಖೆ ಸಚಿವರನ್ನು ಭೇಟಿ ಮಾಡಿ, ಅನುದಾನ ಮಂಜೂರು ಮಾಡುವ ಕೆಲಸ ಮಾಡುತ್ತೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಕೀಲರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಮ್ಮ ತಂದೆ, ನಮ್ಮ ಧರ್ಮಪತ್ನಿ ಸಹ ವಕೀಲರಾಗಿದ್ದು, ನಾವೂ ನಿಮ್ಮ ಕುಟುಂಬದಲ್ಲಿ ಒಬ್ಬರಾಗಿದ್ದೇವೆ ಎಂದು ತಿಳಿಸಿದರು.
ನ್ಯಾಯಾಲಯ ಎಂದ ಕೂಡಲೇ ಅಮಾಯಕರಿಗೆ ಸಾಕಷ್ಟು ಭಯವಿದೆ. ಆ ಭಯ ಹೋಗಲಾಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಜನಸಾಮಾನ್ಯರಿಗೆ ನ್ಯಾಯವು ಸರಳವಾಗಿ ಸಿಗುವಂತಾಗಲಿ. ಶಾಶ್ವತ ನ್ಯಾಯಾಲಯ ಆಗುವರೆಗೂ ಪಟ್ಟಣದ ನೀರಾವರಿ ಇಲಾಖೆಯಲ್ಲಿ ಕಟ್ಟಡಗಳು ಖಾಲಿ ಇದ್ದು, ಅವುಗಳನ್ನು ನ್ಯಾಯಾಧೀಶರನ್ನು ಕರೆದುಕೊಂಡು ಹೋಗಿ ಪರೀಶಿಲಿಸಿ ಒಪ್ಪಿಗೆ ಇದ್ದರೇ ಅಲ್ಲಿಗೆ ನ್ಯಾಯಾಲಯ ಸ್ಥಳಾಂತರಿಸೋಣ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಕ್ಕದಾಗಿರುವ ಜಾಗದಲ್ಲಿ 11 ವರ್ಷಗಳವರೆಗೆ ನ್ಯಾಯಾಲಯ ನಡೆಸುತ್ತಿರುವುದು ನ್ಯಾಯಾಧೀಶರ ಹಾಗೂ ವಕೀಲರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದಾಗಿದೆ ಎಂದರು.
ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಎಸ್. ಮಿಟ್ಟಲಕೋಡ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ, ಪ್ರಧಾನ ದಿವಾಣಿ ನ್ಯಾಯಾಧೀಶ ಸಂಜೀವಕುಮಾರ ಪಾಶ್ಚಾಪೂರೆ, ಕೆರೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಡಿ. ಕಿರಗಿ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ರಾಯಚೂರ, ಉಪಾಧ್ಯಕ್ಷ ಎಸ್.ವೈ. ಹೊಸಮನಿ, ಕಾರ್ಯದರ್ಶಿ ಬಿ.ಎಸ್. ಬೆನಕಟ್ಟಿ ಇತರರಿದ್ದರು.
ಸಂಜಯ ಬರಗುಂಡಿ, ಮುಖ್ಯಾಧಿಕಾರಿ ಎ.ಎಸ್. ಮುಜಾವರ ನ್ಯಾಯಾವಾದಿಗಳಾದ ಜಿ.ಎಸ್. ರಾಂಪೂರ, ಜಿ.ಐ. ಮೇಟಿ, ಎಸ್.ಆರ್. ಬರಹಾಣಪುರ, ಕೆ.ಟಿ. ಪವಾರ, ಎ.ಬಿ. ಉದ್ನೂರ, ಪಿ.ಆರ್. ಬಡಿಗೇರ, ಮಹಾಂತೇಶ ಗೌಡರ, ಶಕೀಲ ಕಂಟ್ರಾಕ್ಟರ್, ತೋಳಮಟ್ಟಿ, ರಮೇಶ ಅಲದಿ, ರವಿ ಗೌಡ್ರ, ಜಿ.ಎಸ್. ಕೊರ್ತಿ, ಎಸ್.ಎಸ್. ಮಲಜಿ, ಲಕ್ಷ್ಮೀ ಗೌಡರ, ಸುಷ್ಮಾ ನರೇಗಲ್ಲ, ಮಂಜು ನಾಯನೇಗಲಿ ಇದ್ದರು.