ಮಲೆನಾಡಿನ ಸಮಸ್ಯೆ ಪರಿಹಾರಕ್ಕೆ ಯತ್ನ

nrp 1 (15)
Published on

ಎನ್.ಆರ್.ಪುರ: ನಾನು ರಾಜ್ಯಪಾಲರಿಂದ ನಾಮಿಯಾಗಿರುವ ಎಂಎಲ್ಸಿ ಯಾಗಿದ್ದು, ನಾನು ಯಾವ ಜಿಲ್ಲೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ ನಮ್ಮ ತಂದೆ ಅವರ ಜಿಲ್ಲೆಯೇ ಬೇಕು ಎಂದು ಈ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡೆ. ನಮ್ಮ ತಂದೆ ಜನ್ಮ ಭೂಮಿ ಶೃಂಗೇರಿ ಆದರೆ ಕರ್ಮಭೂಮಿ ಎನ್.ಆರ್.ಪುರ ಎಂದು ಎಂಎಲ್ಸಿ ಡಾ.ಆರತಿಕೃಷ್ಣ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ನಮ್ಮ ತಂದೆ ಮೊದಲು ವಕೀಲ ವೃತ್ತಿ ಪ್ರಾರಂಭಿಸಿದ್ದು ಇದೇ ಊರಿನಲ್ಲಿ. ನಾನು ಎಂಎಲ್ಸಿ ಆಗಿ ಆಯ್ಕೆಯಾದ ಬಳಿಕ ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಹುದ್ದೆಗೆ ರಾಜೀನಾಮೆ ಸಲ್ಲಿಸಲಾಗಿದೆ. ನಾನು ಅನಿವಾಸಿ ಭಾರತೀಯ ಉಪಾಧ್ಯಕ್ಷೆಯಾಗಿದ್ದಾಗ ಹೊರ ದೇಶಗಳ ಸಂಪರ್ಕದಲ್ಲೇ ಇರಬೇಕಾಗಿತ್ತು. ಆದ್ದರಿಂದ ಈ ಭಾಗದಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ಈ ಭಾಗದ ಜನರು ಬಂದಾಗ ನನ್ನ ಕೈಯಲ್ಲಿ ಅದ ಸಹಾಯ ಮಾಡಿದ್ದೇನೆ. ಈಗ ನಾನು ಎಂಎಲ್ಸಿ ಆಗಿರುವುದರಿಂದ ವಿಧಾನ ಪರಿಷತ್‌ನಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅವಕಾಶ ದೊರೆತಿದೆ. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಆರತಿಕೃಷ್ಣ ಅವರಿಗೆ ಅರ್ಹತೆಗೆ ತಕ್ಕ ಹುದ್ದೆ ಅಧಿಕಾರ ಲಭಿಸಿದೆ. ಕಾಡಾ ಅಧ್ಯಕ್ಷರು, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಇದ್ದು ಈಗ ಆರತಿಕೃಷ್ಣ ಅವರು ಎಂಎಲ್ಸಿ ಆಗಿರುವುದು ಇನ್ನಷ್ಟು ಶಕ್ತಿ ಬಂದಿದೆ. ಬೇಗಾನೆ ರಾಮಯ್ಯನವರು ಕ್ಷೇತ್ರದ ಶಾಸಕರಾದಾಗ ಗ್ರಾಮೀಣಾಭಿವೃದ್ಧಿ ಸಚಿವರಾಗಲು ಅವಕಾಶ ದೊರೆಯಿತು. ಆ ಸಂದರ್ಭದಲ್ಲಿ ಜನಸಂಖ್ಯೆಗೆ ಅಗನುಗುಣವಾಗಿ ಬೋರ್‌ವೆಲ್ ಕೊರೆಸಲು ಮಾತ್ರ ಅವಕಾಶವಿತ್ತು. ಇಂತಹ ಸಂದರ್ಭದಲ್ಲೂ ನಮ್ಮ ಕ್ಷೇತ್ರದಲ್ಲಿ ಹೆಚ್ಚು ಬೋರ್‌ವೆಲ್ ಕೊರೆಸಿ ರೈತರ ಬಾಳಿಗೆ ಆಶಾಕಿರಣವಾದವರು. ಡಾ.ಆರತಿಕೃಷ್ಣ ಅವರು ನಮ್ಮೊಂದಿಗೆ ಅಭಿವೃದ್ಧಿಗೆ ಕೈಜೋಡಿಸಿದರೆ ಕ್ಷೇತ್ರದಲ್ಲಿ ಐತಿಹಾಸಿಕ ಅಭಿವೃದ್ಧಿಯಾಗಲಿದೆ ಎಂದರು.

ಪಪಂ ಅಧ್ಯಕ್ಷೆ ಜುಬೇದಾ, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಕ್ಷದ ಮುಖಂಡರಾದ ಕೆ.ಎಂ.ಸುಂದರೇಶ್, ಎಸ್.ಡಿ.ರಾಜೇಂದ್ರ, ಕೆ.ಪಿ.ಮೀನಾಕ್ಷಿ ಕಾಂತರಾಜ್, ಬಿ.ವಿ.ಉಪೇಂದ್ರ, ಮಾಳೂರು ದಿಣ್ಣೆರಮೇಶ್, ಸುನೀಲ್‌ಕುಮಾರ್, ಅಂಜುಮ್, ಎಚ್.ಎಂ.ಶಿವಣ್ಣ, ದೇವಂತರಾಜ್‌ಗೌಡ, ಕೆ.ಎ.ಅಬೂಬಕರ್, ಎಚ್.ಬಿ.ರಘುವೀರ್, ಕೆ.ವಿ.ಸಾಜು, ಶ್ರೀಜಿತ್, ರತನ್‌ಗೌಡ, ಉಮಾಕೇಶವ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net