ರೈತರ ಕಷ್ಟ ಪರಿಹಾರಕ್ಕೆ ಪ್ರಯತ್ನ

4ATHANIGRAMIN1
Published on

ಅಥಣಿ ಗ್ರಾಮೀಣ: ಅಧಿಕಾರಕ್ಕಿಂತ ಅಭಿವೃದ್ಧಿಯೇ ನನ್ನ ಕನಸಾಗಿದ್ದು, ಕ್ಷೇತ್ರದ ರೈತರ ಕಷ್ಟಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಮಸರಗುಪ್ಪಿ ಗ್ರಾಮದಿಂದ ದೇವರಡ್ಡೇರಹಟ್ಟಿ ಗ್ರಾಮದವರೆಗಿನ 40 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ರಸ್ತೆ, ನೀರಾವರಿ ಯೋಜನೆ, ಕುಡಿಯುವ ನೀರು ದೊರಕಿಸುವಲ್ಲಿ ಪ್ರಾಮಾಣಿಕ ಪಯತ್ನ ಮಾಡುತ್ತಿದ್ದೇನೆ. ತಾಲೂಕಿಗೆ ನೀರಾವರಿ ಒದಗಿಸಿ ಜನರ ಹಿತದೃಷ್ಟಿ ಕಾಪಾಡಲು ಸಿದ್ಧನಿದ್ದೇನೆ. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರವಾದಂತೆ ಎಂಬ ಮಹಾತ್ಮ ಗಾಂಧೀಜಿಯವರ ಕನಸು ಸಾಕಾರವಾಗುತ್ತದೆ. ಜಾತಿ, ಧರ್ಮವೆನ್ನದೆ ಭಾರತೀಯರು ಒಂದೇ ಎನ್ನುವ ಸಂವಿಧಾನದ ಆಶಯದಂತೆ ಕೆಲಸ ಮಾಡುವುದಾಗಿ ತಿಳಿಸಿದರು.

ಕೃಷಿ ಕಾಲೇಜು ಸೇರಿದಂತೆ ಕ್ಷೇತ್ರದ ಇನ್ನುಳಿದ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಹಂತ-ಹಂತವಾಗಿ ಕೆಲಸ ಆರಂಭಿಸಲಾಗುವುದು. ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರಲ್ಲಿದೆ. ಶಿಕ್ಷಣ ಕ್ಷೇತ್ರ ಸುಧಾರಿಸಿದಲ್ಲಿ ಮಾತ್ರ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಗ್ರಾಪಂ ಅಧ್ಯಕ್ಷ ಶಂಕರ ಗಡದೆ, ಗ್ರಾಪಂ ಉಪಾಧ್ಯಕ್ಷೆ ರೂಪಾ ಸೋನಕರ, ಅರುಣ ಬಾಸಿಂಗೆ, ಪರಶುರಾಮ ಸೋನಕರ, ಅಪ್ಪಾಸಾಹೇಬ ಕೋರಿಶೆಟ್ಟಿ, ಹನುಮಂತ ಭಜಂತ್ರಿ, ಶಿವಾನಂದ ದಿವಾನಮಳ, ಶಿವಾನಂದ ನಾಯಿಕ, ಸುರೇಶ ಗುಳಪ್ಪನವರ, ಶ್ರೀಶೈಲ ನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net