ಮೂಲಸೌಲಭ್ಯ ಒದಗಿಸಲು ಪ್ರಯತ್ನ

28Ckd3
Published on

ಚಿಕ್ಕೋಡಿ: ಮಜಲಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೂಲಸೌಲಭ್ಯ ಒದಗಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ದುರ್ಯೋಧನ ಐಹೊಳೆ ಭರವಸೆ ನೀಡಿದರು.

ತಾಲೂಕಿನ ಮಜಲಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನಾಲ್ಕು ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಬಡ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಆ ಮಕ್ಕಳು ಉನ್ನತ ಸಾಧನೆ ಮಾಡಲು ಕಾಲೇಜಿನಲ್ಲಿ ಬೇಕಾಗುವ ಸೌಕರ್ಯ ಒದಗಿಸುತ್ತೇನೆ. ಕಾಲೇಜಿಗೆ ಅತಿಥಿ ಉಪನ್ಯಾಸಕರನ್ನು ಹೆಚ್ಚಿಗೆ ಭರ್ತಿ ಮಾಡಿಕೊಳ್ಳಲು ಪ್ರಾಚಾರ್ಯರಿಗೆ ಅಧಿಕಾರ ಇರುತ್ತದೆ. ಕಾಲೇಜಿಗೆ ಹೆಚ್ಚು ಉಪನ್ಯಾಸಕರನ್ನು ನೀಡುವಂತೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ. ಇರುವ ಉಪನ್ಯಾಸಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ನಿರತವಾಗಬೇಕು ಎಂದರು.

ಪ್ರಾಚಾರ್ಯ ಆನಂದ ಕೋಳಿ ಮಾತನಾಡಿ, ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಸಕ್ತ ವರ್ಷ 2,300 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. 16 ಉಪನ್ಯಾಸಕರು ಕಾಯಂ ಇದ್ದರೆ, 37 ಅತಿಥಿ ಉಪನ್ಯಾಸಕರ ಮೇಲೆ ತರಗತಿ ನಡೆಸಲಾಗುತ್ತಿದೆ. ಸರ್ಕಾರ ಇನ್ನೂ ಹೆಚ್ಚಿನ ಉಪನ್ಯಾಸಕರನ್ನು ನೇಮಿಸಬೇಕು. ಹೆಚ್ಚುವರಿ ಕೊಠಡಿ ಮಂಜೂರು ಮಾಡಿ ಕಾಲೇಜು ಬೆಳವಣಿಗೆಗೆ ಪ್ರೋತ್ಸಾಹ ಕೊಡಬೇಕೆಂದರು.

ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ವಿಜಯ ಕೊಠಿವಾಲೆ, ರಾಜು ನಾಯಿಕ, ಸುಭಾಷ ನಾಗರಾಳೆ, ದುಂಡಪ್ಪ ಸನದಿ, ಅಣ್ಣಾಸಾಹೇಬ ಖೇಮಲಾಪುರೆ, ಜಿ.ಆರ್.ಬಿರಾದಾರ, ರಾಜು ಹರಗಾಪೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net