ಶಾಲಾ&ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸಲು ಶ್ರಮ

27Anand3
Published on

ಬೆಳಗಾವಿ: ಸಹೋದರಿ ಲಕ್ಷಿ$್ಮ ಹೆಬ್ಬಾಳ್ಕರ್​ ಸಚಿವರಾದ ನಂತರ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ವಿಶೇಷವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ತಾಲೂಕಿನ ಬೆಳಗುಂದಿ ಗ್ರಾಮದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಪ್ರೊಪ್ಲೆಕ್ಸ್​ ಸೀಟ್​ ಸಭಾ ಮಂಟಪವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳು ಸಹ ದೊಡ್ಡ ಹುದ್ದೆಗೇರಬೇಕೆನ್ನುವುದೇ ನಮ್ಮ ಅಪೇೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಶ್ರಮಿಸಲಾಗುತ್ತಿದೆ ಎಂದರು.

ಎಸ್​ಡಿಎಂಸಿ ಅಧ್ಯ ಕೃಷ್ಣ ಬೆಳಗಾಂವ್ಕರ್​, ಶಿವಾಜಿ ಬೋಕಡೆ, ಸೋಮಣ್ಣ ಗಾವಡಾ, ದಯಾನಂದ ಗಾವಡಾ, ಮನೋಹರ್​ ಬೆಳಗಾಂವ್ಕರ್​, ರಹಿಮಾನ್​ ತಹಶೀಲ್ದಾರ್​, ಶಿವಾಜಿ ಬೆಟಗೇರಿಕರ್​, ಸುರೇಶ ಕಿಣೇಕರ್​, ಕಿರಣ ಮೋಟನಕರ್​, ಮುಕುಂದ್​ ಹಿಂಡಾಲ್ಗೆಕರ್​, ಮಹಾದೇವ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net