ಪ್ರಾಥಮಿಕ ಹಂತದಲ್ಲೇ ಸುಸಂಸ್ಕೃತರಾಗಿಸಲು ಶ್ರಮ

seva
Published on

ಕೋಟ: ಸೇವಾ ಸಂಗಮ ಶಿಶು ಮಂದಿರ ಸಂಸ್ಕಾರ ಭರಿತ ಶಿಕ್ಷಣಕ್ಕೆ ಹೆಸರುವಾಸಿ, ಆದ್ದರಿಂದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಶಿಶುಮಂದಿರಕ್ಕೆ ಮಿಸಲಿಡಿ. ಮಕ್ಕಳನ್ನು ಪ್ರಾಥಮಿಕ ಹಂತದಲ್ಲೇ ಸುಸಂಸ್ಕೃತರನ್ನಾಗಿಸಲು ಪಾಲಕರ ಪಾತ್ರ ಗಣನೀಯ, ಈ ನಿಟ್ಟಿನಲ್ಲಿ ಗುರುಗುಲದ ಮಾದರಿಯಲ್ಲಿ ಸೇವಾ ಸಂಗಮ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.

ಕೋಟ ಸೇವಾಸಂಗಮ ಶಿಶುಮಂದಿರ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸೇವಾ ಸಂಗಮ ಶಿಶು ಮಂದಿರ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಶುಭಾಶಂಸನೆಗೈದರು. ಮುಖ್ಯ ಭಾಷಣಕರಾಗಿ ಸೇವಾ ಸಂಗಮ ವಿಶ್ವಸ್ಥ ಮಂಡಳಿ ಪ್ರಮುಖರಾದ ಕಲ್ಪನಾ ಭಾಸ್ಕರ್ ಪಾಲ್ಗೊಂಡಿದ್ದರು.

ಪುಟಾಣಿಗಳಿಂದ ದೀಪ ನೃತ್ಯ, ಸಂಸ್ಕೃತ ಶ್ಲೋಕ ಗೀತೆಗಳ ಪಠಣ ನಡೆಯಿತು. ಕೋಟ ಶಿಶು ಮಂದಿರ ಉಪಾಧ್ಯಕ್ಷೆ ಗೀತಾ ಎ.ಕುಂದರ್, ಪ್ರಮುಖರಾದ ವಸುಧಾ ಪ್ರಭು, ಸುಶೀಲಾ ಸೋಮಶೇಖರ್, ಚಂದ್ರಕಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಭಾಗ್ಯ ವಾದಿರಾಜ್ ಸ್ವಾಗತಿಸಿದರು. ಭಾಗೇಶ್ವರಿ ಮಯ್ಯ ನಿರೂಪಿಸಿದರು. ಕಾರ್ಯದರ್ಶಿ ಸುಷ್ಮಾ ದಯಾನಂದ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net