ತಾವರಗೇರಾ ತಾಲೂಕನ್ನಾಗಿಸಲು ಪ್ರಯತ್ನ

ತಾವರಗೇರಾದ ಕರ್ನಾಟಕ ಪಬ್ಲಿಕ್ ಶಾಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತರಗತಿ ಕೊಠಡಿ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. ಬಿಇಒ ಜಗದೀಶಪ್ಪ, ಪ್ರಾಚಾರ್ಯ ಸುಭಾಷ್ ಪೋರೆ, ಮುಖ್ಯಶಿಕ್ಷಕ ಮಂಜುನಾಥ ಬಿಳೇಗುಡ್ಡ ಇತರರಿದ್ದರು.
ತಾವರಗೇರಾದ ಕರ್ನಾಟಕ ಪಬ್ಲಿಕ್ ಶಾಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತರಗತಿ ಕೊಠಡಿ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. ಬಿಇಒ ಜಗದೀಶಪ್ಪ, ಪ್ರಾಚಾರ್ಯ ಸುಭಾಷ್ ಪೋರೆ, ಮುಖ್ಯಶಿಕ್ಷಕ ಮಂಜುನಾಥ ಬಿಳೇಗುಡ್ಡ ಇತರರಿದ್ದರು.
Published on

ತಾವರಗೇರಾ: ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಿದರೆ ಅಭ್ಯಾಸದ ಕಡೆ ಗಮನ ಹರಿಸುತ್ತಾರೆ. ಸೌಕರ್ಯ ಒದಗಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಪ್ರತಿಪಕ್ಷ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತರಗತಿ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾವರಗೇರಾ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಐಬಿ ಸರ್ಕಲ್‌ನಿಂದ ಎಸ್‌ಎಸ್‌ವಿ ಕಾಲೇಜುವರೆಗೆ ರಸ್ತೆ ವಿಸ್ತರಣೆ, ಡಿವಾಯ್ಡರ್ ನಿರ್ಮಾಣ, ಆಡಿಟೋರಿಯಮ್ ಸ್ಥಾಪಿಸುವ ಉದ್ದೇಶವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಹೋರಾಟ ಸಮಿತಿ ರಚಿಸಿ ತಾವರಗೇರಾ ತಾಲೂಕನ್ನಾಗಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಶಿಕ್ಷಣ ಇಲಾಖೆಯ ಶಾಲಾ ಸಮಗ್ರ ಸಾರ್ವಜನಿಕ ಶಿಕ್ಷಣ ಅಭಿಯಾನದಡಿ 2 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ 11 ಕೊಠಡಿಗಳನ್ನು ಹಾಗೂ ನಾಮಫಲಕಗಳನ್ನು ಉದ್ಘಾಟಿಸಿದರು.

ಬಿಇಒ ಜಗದೀಶಪ್ಪ, ಸಿಆರ್‌ಸಿ ರಾಗಪ್ಪ ಶ್ರೀರಾಮ, ಲೋಕೋಪಯೋಗಿ ಇಂಜಿನಿಯರ್ ಸುಧಾಕರ, ಜೆಇ ವಿಜಯಕುಮಾರ, ಪ್ರಾಚಾರ್ಯ ಸುಭಾಷ್ ಪೋರೆ, ಮುಖ್ಯಶಿಕ್ಷಕರಾದ ಮಂಜುನಾಥ ಬಿಳೇಗುಡ್ಡ, ಶ್ರೀದೇವಿ ಜ್ಞಾನಮೂರ್ತಿ, ಪ್ರಮುಖರಾದ ವೀರಭದ್ರಪ್ಪ ನಾಲತವಾಡ, ಪಪಂ ಸದಸ್ಯರಾದ ಬಸನಗೌಡ ಓಲಿ, ಅಮರೇಶ ಗಾಂಜಿ, ಸಾಗರ ಬೇರಿ, ಶಾಲಾಭಿವೃದ್ಧಿ ಸದಸ್ಯರಾದ ಶಾಮೀದ್ ಮರಕಟ್, ಶಿವಲಿಂಗಪ್ಪ, ಸಾವಿತ್ರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net