ಕಲಬುರಗಿಯನ್ನು ಸಾಂಸ್ಕೃತಿಕ ಜಿಲ್ಲೆಯಾಗಿಸಲು ಶ್ರಮ

Kannada Flag
Published on

ಶಹಾಬಾದ್: ರಾಜ್ಯದ 30 ಜಿಲ್ಲೆಗಳಲ್ಲಿಯೇ ಹೆಚ್ಚು ಕನ್ನಡದ ಕಾರ್ಯಕ್ರಮಗಳು ನಮ್ಮಲ್ಲೇ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಕಲಬುರಗಿಯನ್ನು ಸಾಂಸ್ಕೃತಿಕ ಜಿಲ್ಲೆಯಾಗಿಸುವ ಗುರಿ ಪರಿಷತ್‌ನದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

ಎಂಸಿಸಿ ಶಾಲೆಯಲ್ಲಿ ಸುವರ್ಣ ರಾಜ್ಯೋತ್ಸವ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಷತ್ ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಕೇವಲ ಕವಿ, ಸಾಹಿತಿಗಳಿಗಷ್ಟೆ ಅಲ್ಲ ಎಲ್ಲರಿಗೂ ಸೀಮಿತವಾಗಿದೆ. ಕನ್ನಡವನ್ನು ಜನಸಾಮಾನ್ಯರ ಹತ್ತಿರ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತಿದೆ ಎಂದರು.

ಎAಸಿಸಿ ಶಾಲೆ ಮುಖ್ಯಗುರು ಸಿಸ್ಟರ್ ಲಿನೇಟಾ ಸಿಕ್ವೇರಾ ಮಾತನಾಡಿದರು. ಭಂಕೂರ ಗ್ರಾಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಕಲಬುರಗಿ ತಾಲೂಕು ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಶಿಕ್ಷಣ ಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಅನುಪಮಾ, ಉದ್ಯಮಿ ಅಣವೀರ ಇಂಗಿನಶೆಟ್ಟಿ, ಡಿ.ಸ್ಪೀರಿಟ್ ನೃತ್ಯ ಕೇಂದ್ರದ ನಿರ್ದೇಶಕ ಪ್ರಮೋದ ನಾಟೀಕಾರ, ಪ್ರಮುಖರಾದ ವಿಶ್ವರಾಧ್ಯ ಬಿರಾಳ, ಪ್ರಕಾಶ ಮಾಲಿಪಾಟೀಲ್, ಬಾಬುರಾವ ಪಂಚಾಳ, ಶರಣಗೌಡ ಪೊಲೀಸ್ ಪಾಟೀಲ್, ಭರತ ಧನ್ನಾ, ರಾಜು ಕೋಬಾಳ, ದಶರಥ ಕೋಟನೂರ, ಶರಣಗೌಡ ಇತರರಿದ್ದರು.

ಎಂಸಿಸಿ ಶಾಲೆ ವಿದ್ಯಾಥಿಗಳು ಹಾಗೂ ಡಿ.ಸ್ಪೀರಿಟ್ ನೃತ್ಯ ಕೇಂದ್ರದ ಮಕ್ಕಳಿಂದ ಕನ್ನಡ ಹಾಡುಗಳ ನೃತ್ಯ ಪ್ರದರ್ಶನ ನಡೆಯಿತು. ವಿಶ್ವನಾಥ ತೊಟ್ನಳ್ಳಿ ನಿರೂಪಣೆ ಮಾಡಿದರು. ಶಿಕ್ಷಕಿ ಸುರೇಖಾ ಸ್ವಾಗತಿಸಿದರು. ಶರಣು ವಸ್ತçದ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net