

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ದೇಶದಲ್ಲಿ ಹಿಂದಿ ಭಾಷೆ ಬಳಕೆ ಕಡಿಮೆಯಾಗುತ್ತಿದೆ. ವ್ಯಾಕರಣೀಯ ಹಿಂದಿ ಭಾಷೆಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಧಾರವಾಡದ ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಹೇಳಿದರು.
ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಕರ್ನಾಟಕ) ಸಂಸ್ಥೆ ವತಿಯಿಂದ ಸಭಾದ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಹಿಂದಿ ಪ್ರಚಾರಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹಿಂದಿ ಪ್ರಚಾರ ಸಭಾ ನಿಕಟಪೂರ್ವ ಅಧ್ಯಕ್ಷ ಈರೇಶ ಅಂಚಟಗೇರಿ ಮಾತನಾಡಿ, ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಪರಿವರ್ತನೆ ಮಾಡುವ ಮೂಲಕ ನಾವು ಇನ್ನಷ್ಟು ಹಿಂದಿಯನ್ನು ದಕ್ಷಿಣ ಭಾರತದಲ್ಲಿ ಸಧೃಢಗೊಳಿಸಲು ಪ್ರಯತ್ನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಧಾರವಾಡದ ಅಧ್ಯಕ್ಷ ರಾಘವೇಂದ್ರ ತವನಪ್ಪನವರ ಮಾತನಾಡಿದರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಧಾರವಾಡದಿಂದ ನಡೆಸುವ ಹಿಂದಿ ಪರೀಕ್ಷೆಗಳಲ್ಲಿ ವಿದ್ಯಾಥಿರ್ಗಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತಿರುವ ಪ್ರಚಾರಕರಾದ ಪವಿತ್ರಾ ನಂಜಯ್ಯನಮಠ, ರಮೇಶ ಬೈಬತ್ತಿ, ಶಾಂತಿನಾಥ ಉಪಾಧ್ಯೆ, ಬಿ. ನಾಗರಾಜ, ಡಾ. ಮಂಜುನಾಥ ಪಾಂಡೆ, ಶುಭದಾ ಹನುಮನಂತಪ್ಪ, ಕೆ.ಆರ್. ಕುಸುಮಾ, ಮಾಲತಿ ಪೈ, ಮೆಹಬೂಬ ನಂದನೂರ, ಉಸ್ಮಾನ್ ಘನಿ, ರಮೇಶ ಲಮಾಣಿ, ಲೋಕೇಶ ಗುರುವಯ್ಯನವರ, ಶಿವಕುಮಾರ ಜಗದಂಡಿ, ಬಸಕ್ಕ ನಾಗನೂರಿ, ಶೋಭಾ ದೀಕ್ಷಿತ, ಎನ್.ಜಿ. ಇಂದಿರಾ, ಡಾ. ಎಂ. ಎಂ. ಹಲಗಿ ಅವರಿಗೆ ಸನ್ಮಾನಿಸಲಾಯಿತು.
ಸಭಾದ ಕೋಶಾಧ್ಯಕ್ಷ ಜಗದೀಶ ಮಳಗಿ, ಎಸ್. ರಾಧಾಕೃಷ್ಣನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಉಮಾ ಚವ್ಹಾಣ, ನಾರಾಯಣ ಮೋರೆ, ತಾಳಿಕೋಟಿ, ಬಸವರಾಜ ವಸ್ತ್ರದ, ಮಾಲಾ, ಅಶೋಕ ಶೆಟ್ಟರ್, ಸಂಸ್ಥೆಯ ಶಾಲೆ, ಕಾಲೇಜು, ಪ್ರಾಧ್ಯಾಪಕರು, ಇತರರು ಇದ್ದರು.