ಬಬಲೇಶ್ವರ ಮಾದರಿ ಕ್ಷೇತ್ರವಾಗಿಸಲು ಪ್ರಯತ್ನ

Efforts to make Babaleshwar a model constituency
ಮಮದಾಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅಭಿನವ ಮುರುಂದ್ರ ಸ್ವಾಮೀಜಿ, ಸಂಗಮೇಶ ಬಬಲೇಶ್ವರ, ಮಲ್ಲಿಕಾರ್ಜುನ ಗಂಗೂರ ಮತ್ತಿತರರಿದ್ದಾರೆ.
Published on

ವಿಜಯಪುರ : ಬಬಲೇಶ್ವರ ಮತೇತ್ರ ರಾಜ್ಯದಲ್ಲಿಯೇ ಮಾದರಿ ೇತ್ರವಾಗಿಸಲು ರಸ್ತೆ, ವಿದ್ಯುತ್​, ನೀರಾವರಿ ಸೇರಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಮಮದಾಪುರ&ದೂಡಿಹಾಳ ಮುಖಾಂತರ ರಾಷ್ಟ್ರೀಯ ಹೆದ್ದಾರಿ&218 ಕ್ಕೆ ಕೂಡುವ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶೇಗುಣಸಿಯಿಂದ ಮಮದಾಪುರವರೆಗೆ 9.5 ಕಿ.ಮೀ. ರಸ್ತೆಯನ್ನು 15 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮಮದಾಪುರದಿಂದ ರಾಷ್ಟ್ರೀಯ ಹೆದ್ದಾರಿ 218 ರವರೆಗೆ 11.6 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಬಬಲೇಶ್ವರ ಮತೇತ್ರದಲ್ಲಿಯೇ ಮಮದಾಪುರ ಹೋಬಳಿಗೆ ಅತಿ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಬಹುದಶಕಗಳ ಕನಸಾಗಿದ್ದ ಮಮದಾಪುರ ಕೆರೆ ತುಂಬುವ ಯೋಜನೆ ಈಗಾಗಲೇ ಅನುಷ್ಠಾನಗೊಂಡಿದೆ. ನಾನು ಜಲಸಂಪನ್ಮೂಲ ಸಚಿವನಾದ ಮೇಲೆ ಮಮದಾಪುರ ಕೆರೆ ಹೂಳು ತೆಗೆದು ಮನಸ್ಸಿದ್ದರೆ ಮಾರ್ಗ ಎಂಬ ಧೋರಣೆಯೊಂದಿಗೆ ಸಿದ್ಧೇಶ್ವರ ಶ್ರೀಗಳ ಪ್ರೇರಣೆಯೊಂದಿಗೆ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದರು.

ಮಮದಾಪುರ ಕೆರೆ ತುಂಬಿದ ಪರಿಣಾಮ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗಿದೆ. ಕೆಲವು ದಿನಗಳ ಹಿಂದೆ ಹಿಂದುಸ್ತಾನ ಕೋಕಾ ಕೋಲಾ ಬೆವೆರಜಿಸ್​ ಕಂಪನಿಯ ಸಿಎಸ್​ಆರ್​ ಅನುದಾನದಲ್ಲಿ ಐತಿಹಾಸಿಕ ಮಮದಾಪುರ ಕೆರೆ ಪುನರುಜ್ಜೀವನ ಕಾಮಗಾರಿಗೆ ಭೂಮಿಪೂಜೆ ಕೈಗೊಳ್ಳಲಾಗಿದೆ. ಜತೆಗೆ ಮಮದಾಪುರದಲ್ಲಿರುವ 1600 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಅರಣ್ಯ ಪ್ರದೇಶವನ್ನು ನಿಸರ್ಗ ಪ್ರೇಮಿ ಸಿದ್ಧೇಶ್ವರ ಶ್ರೀಗಳಿಗೆ ಅರ್ಪಿಸಲಾಗುತ್ತಿದೆ. ಪ್ರಕೃತಿಯಿಂದ ಬಂದಿದ್ದೇನೆ. ನಿಸರ್ಗದಲ್ಲಿ ವಿಲೀನವಾಗಬೇಕೆಂಬ ಸಿದ್ಧೇಶ್ವರ ಶ್ರೀಗಳ ಆಶಕ್ಕನುಗುಣವಾಗಿ ಶ್ರೀಗಳನ್ನು ಪ್ರಕೃತಿಯಲ್ಲಿ ಕಾಣುವ ನಿಟ್ಟಿನಲ್ಲಿ ಸ್ವಚ್ಛ ಸುಂದರ ಪ್ರಕೃತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ದೇವರಗೆಣ್ಣೂರದಿಂದ ಕೊಡಬಾಗಿ ಕ್ರಾಸ್​ವರೆಗಿನ 6 ಕಿ.ಮೀ. ರಸ್ತೆಗೆ 9 ಕೋಟಿ ರೂ. ಕಂಬಾಗಿ&ಮಮದಾಪುರವರೆಗಿನ 6 ಕಿ.ಮೀ. ರಸ್ತೆಗೆ 8 ಕೋಟಿ ರೂ., ಕೊಡಬಾಗಿ&ಜೈನಾಪುರ ವಾಯಾ ಮಂಗಳೂರುವರೆಗಿನ 5 ಕಿ.ಮೀ. ಹಾಗೂ ಹಳೇ ಜೈನಾಪುರದಿಂದ ಜೈನಾಪುರವರೆಗಿನ 3 ಕಿ.ಮೀ. ರಸ್ತೆ 4.50 ಕೋಟಿ ರೂ., ಶೇಗುಣಸಿ&ಮಮದಾಪುರ 9.5 ಕಿ.ಮೀ. ರಸ್ತೆ 15 ಕೋಟಿ ರೂ. ಮತ್ತು ಶೇಗುಣಸಿಯಿಂದ ಮದಗುಣಕಿವರೆಗಿನ 5 ಕಿ.ಮೀ. ರಸ್ತೆ ನಿರ್ಮಾಣಕ್ಕೆ 4 ಕೋಟಿ ರೂ. ವೆಚ್ಚದ ಕಾಮಗಾರಿ ಅನುಮತಿ ದೊರೆತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟಬುಕ್​ಗಳನ್ನು ವಿತರಿಸಲಾಯಿತು. ಮಮದಾಪುರ ವಿರಕ್ತಮಠದ ಅಭಿನವ ಮುರುಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಾಲ ವಿಕಾಸ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಗ್ರಾಪಂ ಅಧ್ಯ ಮಲ್ಲಿಕಾರ್ಜುನ ಗಂಗೂರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸಿ.ಬಿ. ಚಿಕ್ಕಲಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net