ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಪ್ರಯತ್ನ

3 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಉತ್ತಮ ಬದಲಾವಣೆಗಳನ್ನು ತರಲು ರಾಜೀವ್​ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಪ್ರಯತ್ನಿಸುತ್ತಿದೆ ಎಂದು ರಾಜೀವ್​ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಕೆ. ರಮೇಶ ಹೇಳಿದರು.
ನಗರದ ಭಾರತೀಯ ವೈದ್ಯಕಿಯ ಸಂಘದ ಧಾರವಾಡ ಶಾಖೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಜ್ರಮಹೋತ್ಸವ ಮತ್ತು ಬಹುಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಲೋಪಥಿ, ಆರ್ಯುವೇದ, ಹೋಮಿಯೋಪಥಿ ನರ್ಸಿಂಗ್ ಅಥವಾ ಇತರ ಶ್ರೇಣಿಗಳಲ್ಲಿ ವಿಶ್ವ ವಿದ್ಯಾನಿಲಯ ಮೆಡಿಕಲ್​ ಟ್ರ್ಯಾಕಿಂಗ್​ ಸಿಸ್ಟಂ ಪರಿಕಲ್ಪನೆಗಳನ್ನು ಪರಿಚಯಿಸಲು ಶ್ರಮಿಸುತ್ತಿದೆ ಎಂದ ಅವರು, ಆರೋಗ್ಯ ವ್ಯವಸ್ಥೆಯ ವಿಕಾಸ ಮತ್ತು ಔಷಧಿ ಕ್ಷೇತ್ರದಲ್ಲಿ ನೆಡೆಯುತ್ತಿರುವ ಕ್ರಾಂತಿಕಾರಿ ಬದಲಾವಣೆಗಳನ್ನು ವಿವರಿಸಿದರು.
ಡಾ. ಸಂಜು ಚಟ್ನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಭಾರತೀಯ ವೈದಕೀಯ ಸಂಘದ ಧಾರವಾಡ ಶಾಖೆ ಅಧ್ಯಕ್ಷ ಡಾ. ಸತೀಶ ಇರಕಲ್​ ಮಾತನಾಡಿ, ಎಂ.ಕೆ. ರಮೇಶ ನಾಯಕತ್ವದಡಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹೊಸ ಸುಧಾರಣೆಗಳು ರೂಪಾಂತರಗೊಂಡು ವಿವಿಯು ರಾಷ್ಟ್ರದ ಶ್ರೇಷ್ಠ ವಿಶ್ವ ವಿದ್ಯಾನಿಲಯವಾಗಿ ಮಾರ್ಪಟ್ಟಿದೆ ಎಂದರು.
ಡಾ.ಆನಂದ ಹಂದಿಗೋಳ, ಡಾ.ರವೀಂದ್ರ ಜೋಶಿ, ಅನುಪಮ ನಾಡಿಗೇರ, ಡಾ. ಸಪನ್​, ಡಾ.ವೈ.ಎನ್​. ಇರಕಲ್​, ಡಾ.ದಿಲೀಪ್​ ಕುಲಕರ್ಣಿ, ಡಾ.ಕವಿತಾ ಮಂಕಣಿ, ಡಾ.ವಾಣಿ ಇರಕಲ್​, ಡಾ. ಸರ್ಮಮಂಗಳ, ಡಾ. ರೂಪಾ ಜೋಶಿ, ಡಾ.ರಾಧಿಕಾ ಅಂಬೇಕರ, ಡಾ. ಆರ್​.ಜಿ. ಪುರಾಣಿಕ, ಡಾ. ವಸಂತ ಮನಗುತ್ತಿ, ಡಾ. ಇಕ್ಬಾಲ್​ ಶೇಖ್​, ಡಾ. ಸ್ವಾಮಿ ಕಳಸೂರಮಠ, ಡಾ. ಸಂದೀಪ, ಡಾ.ಪ್ರಕಾಶ, ಡಾ.ಜ್ಯೋತಿಪ್ರಕಾಶ, ಡಾ.ಅಮಿತ್​, ಇತರರು ಇದ್ದರು.
ಡಾ.ಕಾತ್ಯಾಯಿನಿ ಮತ್ತು ಡಾ.ಭಾವನಾ ನಿರೂಪಿಸಿದರು. ಡಾ.ಕಿರಣ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net