ಜನರ ಜೀವನ ಸುಧಾರಿಸಲು ಪ್ರಯತ್ನ

yashaswi
Published on

ಕೋಟ: ಮನ್‌ಮೋಹನ್‌ಸಿಂಗ್ ದೇಶದ ಆರ್ಥಿಕ ವ್ಯವಸ್ಥೆ ಸುವ್ಯವಸ್ಥಿತವಾಗಿಸಿದವರು. ಸಂಸತ್ತಿನಲ್ಲಿ ಅದ್ಭುತ ಮದ್ಯಸ್ಥಿಕೆ ವಹಿಸಿ, ಜನರ ಜೀವನ ಸುಧಾರಿಸಲು ವ್ಯಾಪಕ ಪ್ರಯತ್ನ ಮಾಡಿದವರು. ಭಾರತವನ್ನು ಅಪಾರ ಬುದ್ಧಿವಂತಿಕೆ, ಸಮಗ್ರತೆಯಿಂದ ಮುನ್ನಡೆಸಿದವರು ಎಂದು ಶ್ವೇತಯಾನ ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಹೇಳಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಆಶ್ರಯದಲ್ಲಿ ಶ್ವೇತಯಾನ-90 ಕಾರ್ಯಕ್ರಮದಡಿ ಶುಕ್ರವಾರ ನೀನಾಸಂ ಹೆಗ್ಗೋಡು ತಿರುಗಾಟದ ನಾಟಕ ಪ್ರದರ್ಶನ ಸಂದರ್ಭ ಮನ್‌ಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಉಪನ್ಯಾಸಕ ಮೋಹನ್‌ಚಂದ್ರ ಪಂಜಿಗಾರು, ಮುಖ್ಯಶಿಕ್ಷಕ ದಿವಾಕರ್ ರಾವ್, ಉಪನ್ಯಾಸಕ ಕಿಶೋರ್ ಹಂದೆ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನೀನಾಸಂ ತಿರುಗಾಟದ ನಾಟಕ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net