

ತೂಬಗೆರೆ: ಸಮಾಜದ ಎಲ್ಲ ಬ್ರಾಹ್ಮಣರಿಗೆ ಸರ್ಕಾದ ಸೌಲಭ್ಯ ತಲುಪಬೇಕು ಎನ್ನುವ ಉದ್ದೇಶದೊಂದಿಗೆ ಅರ್ಚಕರು ಮತ್ತು ಪುರೋಹಿತರ ಪರಿಷತ್ ರಚಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಆರ್ಚಕರು ಮತ್ತು ಪುರೋಹಿತರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದರು.
ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯದಲ್ಲಿ ಬುಧವಾರ ಆಯೋಜಿಸಿದ್ದ ಅರ್ಚಕರು ಮತ್ತು ಪುರೋಹಿತರ ಪರಿಷತ್ತಿನ ಗ್ರಾಮಾಂತರ ಜಿಲ್ಲೆ ಘಟಕ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ 30 ಜೆಲ್ಲೆಗಳಲ್ಲಿ ಸುಮಾರು 10000 ಸಾವಿರ ಪುರೋಹಿತರು ಮತ್ತು ಅರ್ಚಕರನ್ನೊಳ್ಳಗೊಂಡಂತೆ ಪರಿಷತ್ ಸ್ಥಾಪಿಸಲಾಗಿದೆ. ಬ್ರಾಹ್ಮಣ ಸಮಾಜದಲ್ಲಿ ಸುಮಾರು 24 ಉಪ ಜಾತಿಗಳಿವೆ. ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವಾನಥ್, ಕ್ಷೇತ್ರದಲ್ಲಿ ಸಮುದಾಯದ ಬಡವರಿಗೆ 1000 ಮನೆ ವಿತರಿಸಿದ್ದಾರೆ, ಗುಡಿ ಕೈಗಾರಿಕೆ ನಡೆಸುವ ಮಹಿಳೆಯರಿಗೆ 20.000 ರೂ. ಸಹಾಯ ಧನ ನೀಡುವ ಯೋಜನೆ ಅನುಷ್ಠಾನ ತಂದಿದ್ದೇವೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ಪರಿಷತ್‌ನ ಹಿರಿಯ ಉಪಾಧ್ಯಕ್ಷ ರಾಘವೇಂದ್ರ ಭಟ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಪವನ್ ಕುಮಾರ್, ಸಂಚಾಲಕ ಪ್ರವೀಣ್ ವಿ. ಇತರರು ಹಾಜರಿದ್ದರು.
ಪರಿಷತ್‌ನ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಎಸ್.ನವೀನ್, ನೆಲಮಂಗಲ ಅಧ್ಯಕ್ಷ ಬಿ.ಎನ್.ಮಂಜುನಾಥ್, ಹೊಸಕೋಟೆ ಅಧ್ಯಕ್ಷ ಎ.ಎನ್.ಕೇಶವಮೂರ್ತಿ, ದೇವನಹಳ್ಳಿ ಅಧ್ಯಕ್ಷರಾಗಿ ಜೆ.ಕೆ.ಮಂಜುನಾಥ್ ಅವರನ್ನು ನೇಮಕಾತಿ ಮಾಡಲಾಯಿತು.