ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರಯತ್ನ

23MURAGOD1
Published on

ಮುರಗೋಡ: ಎಲ್ಲ ಸಮುದಾಯದ ಜನರು ಅಗಮಿಸುವ ದೇವಸ್ಥಾನ ಮತ್ತು ಪ್ರವಾಸಿ ಸ್ಥಾನಗಳ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಮೀಪದ ಸೊಗಲ ಗ್ರಾಮದಲ್ಲಿ ಎಸ್​ಎಚ್​ಡಿಪಿ ಯೋಜನೆಯಡಿ 30 ಕೋಟಿ ರೂ. ವೆಚ್ಚದ ಮುರಗೋಡ&ಸೊಗಲ ಮುಖ್ಯರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರವಾಸಿತಾಣಗಳನ್ನು ಸಂಪರ್ಕಿಸುವ ಸೊಗಲ ೇತ್ರದ ರಸ್ತೆಯನ್ನು ಉತ್ತಮಪಡಿಸುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುತ್ತದೆ. ಮೂಲಸೌಕರ್ಯಗಳಾದ ರಸ್ತೆ ಹಾಗೂ ಸ್ವಚ್ಛತೆ ಕಾಪಾಡಲು ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ. ಶಾಸಕ ಮಹಾಂತೇಶ ಕೌಜಲಗಿ ಬಹುದಿನಗಳ ಬೇಡಿಕೆಯಂತೆ ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಿಸಲು ಗುತ್ತಿಗೆದಾರರು ಶ್ರಮವಹಿಸಬೇಕು ಎಂದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಬೆಲಹೊಂಗಲ ೇತ್ರದ ಸೊಗಲ ಸೋಮೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ತಂದೆ ಶಿವಾನಂದ ಅವರ ಕಾಲದಿಂದಲೂ ಭಕ್ತರ ಅನುಕೂಲಕ್ಕಾಗಿ ನಿರಂತರವಾಗಿ ಶ್ರಮಿಸುತ್ತ ಬಂದಿದ್ದೇನೆ. ಸೊಗಲ ೇತ್ರ ಸಂಪರ್ಕಿಸುವ ಮುರಗೋಡ ರಸ್ತೆ ನಿರ್ಮಾಣದಿಂದ ಜನತೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಯುವ ಕಾಂಗ್ರೆಸ್​ ಮುಖಂಡ ಕಾರ್ತಿಕ ಪಾಟೀಲ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಕಾಶ ಮೂಗಬಸವ, ಮಹಾಂತೇಶ ಕಳ್ಳಿಬಡ್ಡಿ, ಮಹಾಂತೇಶ ಪೂಜೇರಿ, ಮಲ್ಲೂರ&ಸೊಗಲ ಗ್ರಾಪಂ ಅಧ್ಯೆ ಕವಿತಾ ಪಾಟೀಲ, ಆನಂದ ಪಾಶ್ಚಾಪುರ ಸೇರಿ ಸದಸ್ಯರು ಕಾಂಗ್ರೆಸ್​ ಯುವ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net