ಅರಸೀಕೆರೆ ಟಿಎಪಿಸಿಎಂಎಸ್ ಅಭಿವೃದ್ಧಿಗೆ ಪ್ರಯತ್ನ

24arsph1ep
ಅರಸೀಕೆರೆ ಟಿಎಪಿಸಿಎಂಎಸ್ ಕಚೇರಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಕುಮಾರ್ ಮಾತನಾಡಿದರು. ವಿಶಾಲಮ್ಮ, ಲೊಕೇಶ್, ಚಂದ್ರಣ್ಣ, ಚನ್ನಬಸಪ್ಪ ಇತರರು ಇದ್ದರು.
Published on

ಅರಸೀಕೆರೆ: ದಶಕಗಳ ಇತಿಹಾಸ ಹೊಂದಿರುವ ಪಟ್ಟಣದ ಟಿಎಪಿಸಿಎಂಎಸ್ ಅನ್ನು ಷೇರುದಾರರು ಹಾಗೂ ರೈತರ ಸಹಕಾರದಿಂದ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೆಲ್ಲೆಂಗೆರೆ ಕುಮಾರ್ ತಿಳಿಸಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಟಿಎಪಿಸಿಎಂಎಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸುರಕ್ಷತೆ ದೃಷ್ಟಿಯಿಂದ ಹುಳಿಯಾರು ರಸ್ತೆಗೆ ಹೊಂದಿಕೊಂಡಂತಿರುವ ಸಂಘದ ಹಳೆಯ ಕಟ್ಟಡಕ್ಕೆ ಮೇಲ್ಘಾವಣಿ ಅಳವಡಿಸಬೇಕಿದ್ದು, ಎಲ್ಲರ ಸಹಕಾರ ಅಗತ್ಯ ಇದೆ ಎಂದರು. ಕಾರ್ಯದರ್ಶಿ ಮೋಹನ್ ಕುಮಾರ್ ಮಾತನಾಡಿ, ರಸಗೊಬ್ಬರ ವಿತರಣೆ, ಯಶಸ್ವಿನಿ ಯೋಜನೆ ನೋಂದಣಿ ಮೂಲಕ ಸಂಘದಿಂದ ಜನಪರ ಚಟುವಟಿಕೆ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷೆ ವಿಶಾಲಮ್ಮ, ನಿರ್ದೇಶಕರಾದ ಚನ್ನಬಸಪ್ಪ, ಸಿದ್ದನಾಯ್ಕ, ಲೋಕೇಶ್, ಚಂದ್ರಣ್ಣ, ಗೊಲ್ಲರಹಳ್ಳಿ ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net