

ಬೋರಗಾಂವ: ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡದೆ ಎಲ್ಲರಿಗೂ ಸರ್ಕಾರಿ ಯೋಜನೆಗಳು ತಲುಪಬೇಕು ಎಂದು ಕಳೆದ 17 ವರ್ಷಗಳಿಂದ ಶ್ರಮಿಸುತ್ತಿದ್ದೇನೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸಮೀಪದ ಮಂಗೂರ ಗ್ರಾಮದಲ್ಲಿ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ 1.60 ಕೋಟಿ ರೂ. ಅನುದಾನದಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಶಾಲಾ ಕಾಲೇಜು, ವ್ಯಾಯಾಮ ಶಾಲೆ, ಅಂಗನವಾಡಿ, ಸಮುದಾಯ ಭವನ, ರಸ್ತೆ, ವಿದ್ಯುತ್, ಚರಂಡಿ,
ರಸ್ತೆ, ಜಲ ಯೋಜನೆ, ಕೃಷಿ ಯೋಜನೆ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಮಂಗೂರು ಗ್ರಾಮದಲ್ಲಿ ಗರಡಿ ಮನೆಗೆ 15 ಲಕ್ಷ ರೂ., ಲಿಂಗಾಯತ ಸ್ಮಶಾನಕ್ಕೆ 5 ಲಕ್ಷ ರೂ., ಭೈರವನಾಥ ಪ್ರೌಢಶಾಲೆ ರಸ್ತೆಗೆ 25 ಲಕ್ಷ ರೂ., ಮಂಗೂರು ಯಳಗುಡ ಮುಖ್ಯರಸ್ತೆಗೆ 1.20 ಕೋಟಿ ರೂ. ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ, ನಿತೇಶ ಖೋತ, ಮಾಣಕಾಪುರ ಗ್ರಾಪಂ ಉಪಾಧ್ಯಕ್ಷ ಯೂನಸ್ ಮುಲಾನಿ, ಅರವಿಂದ ಖರಾಡೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸೂರಜ್ ಮಾಳಿ ಮಾತನಾಡಿದರು.
ರಮೇಶ ಪಾಟೀಲ, ಸುಜಾತಾ ಚೌಗುಲೆ, ಸಂದೀಪ ಪಾಟೀಲ, ದೇವದತ್ತ ರಾಜಹಂಸ, ಅರವಿಂದ ಪಾಟೀಲ, ಪ್ರಭಾತ ನಿರ್ವಾಣೆ, ರಾಜೀವ್ ಘೋಡ್ಕೆ, ಶ್ರೀಕಾಂತ ಕಣಗಲೆ, ಚಿಮಸೋ ನಾಡಗೆ, ರಾಜು ಭದರಗಡೆ, ಸತೀಶ ಘೋಡಕೆ ಇತರರಿದ್ದರು.