

ಕೋಲಾರ : ವಸತಿ ನಿಗಮ ಅಧ್ಯಕ್ಷ ಶಿವಲಿಂಗೇಗೌಡ ಹಾಗೂ ವಸತಿ ಸಚಿವರೊಂದಿಗೆ ಚರ್ಚಿಸಿ ರಾಜ್ಯದಲ್ಲಿನ 5-6 ಸಾವಿರ ಮಂದಿ ಪತ್ರಕರ್ತರಿಗೆ ನಿವೇಶನ ಹಂಚಿಕೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಕಲ್ಯಾಣ ನಿಧಿಗೆ ಮುಖ್ಯಮಂತ್ರಿಗಳಿಂದ 25 ಲಕ್ಷ ರೂ. ಮಂಜೂರು ಮಾಡಿಸಿದ ಹಿನ್ನೆಲೆಯಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ಸದಾ ಸಿದ್ಧ ಎಂದರು.
ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ ನನ್ನ ಜನ್ಮಭೂಮಿ ಹಾಗೂ ಕರ್ಮ ಭೂಮಿಯಾದ ಕೋಲಾರ ಮರೆಯುವುದಿಲ್ಲ, ಉಸಿರು ಇರುವವರೆಗೂ ನನ್ನನ್ನು ಬೆಳೆಸಿ ಸಾಧನೆಗೆ ದಾರಿ ತೋರಿದವರನ್ನು ಮರೆಯುವುದಿಲ್ಲ ಎಂದು ತಿಳಿಸಿದರು.
ಸಂತೋಷದ ಸಂದರ್ಭದಲ್ಲಿ ಎರಡು ಕೈಗಳಿಂದ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸುತ್ತೇವೆ. ಆದರೆ ದುಖ@ದ ಸಂದರ್ಭದಲ್ಲಿ ಕಣ್ಣಿರು ಒರೆಸಲು ಒಂದು ಬೆರಳು ಸಾಕು. ಸಾಮಾನ್ಯ ಪತ್ರಕರ್ತನಾಗಿ ಕಷ್ಟ&ಸುಖಗಳನ್ನು ಅನುಭವಿಸಿರುವ ನನಗೆ ಕರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅನೇಕ ಗೆಳೆಯರನ್ನು ಕಳೆದುಕೊಂಡ ನೋವು ಮರೆಯಲು ಸಾಧ್ಯವಿಲ್ಲ. ಹಾಗಾಗಿ ಪತ್ರಕರ್ತರಿಗೆ ಆರೋಗ್ಯ ಸಂಜೀವಿನಿ ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ದೊರೆಯುವಂತೆ ಸಿಎಂ ಗಮನಕ್ಕೆ ತಂದು ಮಂಜೂರು ಮಾಡಿಸುವುದು ಕರ್ತವ್ಯವಾಗಿತ್ತು ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ಕೋಲಾರಕ್ಕೂ ನನಗೂ ಅವಿಭಾಜ್ಯ ಸಂಬಂಧವಿದೆ. ನನ್ನ ತಾಯಿಯ ತವರು ಇದೇ ಕೋಲಾರ. ನನ್ನ ತಂದೆ ಬೆಮೆಲ್ ದಿನಗೂಲಿ ನೌಕರರಾಗಿದ್ದು, ತೀರಾ ಬಡತನದ ಪರಿಸ್ಥಿತಿಯಲ್ಲಿ ಬೆಳೆದು, ಸಂತಮೇರಿಯಮ್ಮ ಚರ್ಚಿನಲ್ಲಿ ಮಲಗುತ್ತಿದ್ದೆವು. ಆತ್ಮೀಯ ಪ್ರಭಾಕರ್ ಕರೆದ ಕೊಡಲೇ ತವರಿಗೆ ಓಡಿ ಬಂದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ವಸತಿ ಸಚಿವರ ಮಾದ್ಯಮದ ಸಲಹೆಗಾರ ಲಕ್ಷಿ$್ಮನಾರಾಯಣ, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕರಾದ ಕೆ.ಎಸ್.ಗಣೇಶ್, ವಿ.ಮುನಿರಾಜು. ಖಜಾಂಜಿ ವಾಸುವೇವ ಹೊಳ್ಳ, ಮೀರಾಪ್ರಭಾಕರ್, ಕರ್ನಾಟಕ ಚಲನ ಚಿತ್ರ ನಿರ್ದೇಶಕ ಚಿದಾನಂದ ಪಾಟೀಲ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಜಿ ಎ.ಜಿ. ಸುರೇಶ್ಕುಮಾರ್ ಇದ್ದರು.
ಯೋಜನೆ ಜಾರಿಗೆ ಸಹಕಾರ : ಕೋಲಾರದ ರಿಂಗ್ ರೋಡ್, ನೀರಾವರಿ ಯೋಜನೆಗಳು ಸೇರಿ ಇತರ ಅಭಿವೃದ್ದಿ ಕಾರ್ಯಗಳ ಬೇಡಿಕೆ ಈಡೇರಿಕೆಗೆ ಸಹಕಾರ ಸದಾಕಾಲ ಇರುತ್ತದೆ. ಜಿಲ್ಲೆಯ ಶಾಸಕರ ಜತೆ ನಾನು ಸಹ ಮುಖ್ಯಮಂತ್ರಿಗಳ ಬಳಿ ಧ್ವನಿಗೊಡಿಸುವ ಕೆಲಸ ಮಾಡುತ್ತೇನೆ ಎಂದು ಕೆ.ವಿ. ಪ್ರಭಾಕರ್ ತಿಳಿಸಿದರು.