ಜೈನ ಸಮುದಾಯ ಅಭಿವೃದ್ಧಿಗೆ ಶ್ರಮ

24Brg1
Published on

ಬೋರಗಾಂವ: ದಿ.ರಾವಸಾಹೇಬ ಪಾಟೀಲ ಅವರ ಆಶೀರ್ವಾದ ಮತ್ತು ಸಹೋದ್ಯೋಗಿಗಳ ಪ್ರಯತ್ನದಿಂದ ದಣ ಭಾರತ ಜೈನ ಸಭಾದ ಉಪಾಧ್ಯನಾಗಿ ಆಯ್ಕೆಯಾಗಿದ್ದೇನೆ ಎಂದು ಉದ್ಯಮಿ ಅಭಿನಂದನ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಸಭಾಂಗಣದಲ್ಲಿ ಗುರುವಾರ ದಣ ಭಾರತ ಜೈನ ಸಭಾದ ಉಪಾಧ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿವಿಧ ೇತ್ರದ ಗಣ್ಯರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿವಾನ ಬಹದ್ದೂರ್​ ಲಠ್ಠೆ ಮತ್ತು ವೀರಾಚಾರ್ಯ ಕುಚನುರೆ ಅವರಂತೆ ಗ್ರಾಮೀಣ ಪ್ರದೇಶಗಳಲ್ಲಿ ಜೈನ ಸಮುದಾಯದೊಂದಿಗೆ ಸಾಮರಸ್ಯದಿಂದ ವರ್ತಿಸುವುದು ಮತ್ತು ಒಂದೇ ಛಾವಣಿಯಡಿ ಸಭೆ ತರುವುದು ಅವಶ್ಯ ಎಂದರು.

ದಣ ಭಾರತ ಜೈನ ಸಭಾದ ವ್ಯಾಪ್ತಿ ವಿಸ್ತರಿಸಲು ಮತ್ತು ಶಿಣ, ಆರೋಗ್ಯ, ಸಂಸತಿ, ಕೃಷಿ ಮತ್ತು ಉದ್ಯೋಗ ೇತ್ರಗಳಿಗೆ ಆದ್ಯತೆ ನೀಡುತ್ತೇನೆ. ಜೈನ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ನಿರುದ್ಯೋಗಿ ಯುವ ಜನಾಂಗದ ಸಮಸ್ಯೆ ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಡ ಮಕ್ಕಳಿಗೆ ಉನ್ನತ ಶಿಣ ನೀಡಲು ಪ್ರಯತ್ನಿಸುತ್ತೇನೆ ಎಂದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಪಂಚಗಂಗಾ ಸಹಕಾರಿ ಕಾರ್ಖಾನೆ ಅಧ್ಯ ಪಿ.ಎಂ. ಪಾಟೀಲ, ದತ್ತ ಕಾರ್ಖಾನೆ ನಿರ್ದೇಶಕ ಇಂದ್ರಜಿತ್​ ಪಾಟೀಲ, ಅಪ್ಪಾಸಾಹೇಬ ಪಾಟೀಲ, ಉದ್ಯಮಿ ಗೌತಮ ಜೆಲೆ, ನಿಪ್ಪಾಣಿ ನಗರಸಭೆ ಸದಸ್ಯ ಉಪಾಸನಾ ಗಾರ್ವೆ, ವಿನಾಯಕ ವಡೆ, ದಿಲೀಪ ಪಠಾಡೆ, ಜಿನ್ನಪ್ಪ ಅಸ್ಕಿ, ಮಹಾವೀರ ನೀಲಜಗಿ, ರಾಜೀವ ಚೌಗುಲಾ, ಅಶೋಕ ಪಾಟೀಲ, ಸುದರ್ಶನ ಖೋತ, ಬಾಳಾಸಾಹೇಬ ಪಾಟೀಲ, ಇಂದ್ರಜಿತ್​ ಸೋಲಂಕುರೆ, ಯುವರಾಜ ಪಾಟೀಲ, ಮಹಾಂತೇಶ ಪಾಟೀಲ, ಸತೀಶ ಪಾಟೀಲ, ಸಚಿನ ಬಿಂದಗೆ, ಅಭಿಜಿತ್​ ಪಾಟೀಲ, ಚೇತನ ಪಾಟೀಲ, ಅರುಣ ಬೋನೆ, ನಿತಿನ ದೇಸಾಯಿ, ಅಣ್ಣಾಸಾಹೇಬ ಕದಂ, ಬಾಳು ದೇಸಾಯಿ, ಸುಕುಮಾರ ಗಿಜುನೆ, ಮುಸಾ ಅಫರಾಜ, ಬಾಳಾಸಾಹೇಬ ಪಾಟೀಲ, ಪಂಕಜ ತಿಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net