

ಕಂಪ್ಲಿ: ಗಂಗಾಮತ ಸಮಾಜವನ್ನು ಎಸ್ಟಿಗೆ ಸೇರಿಸುವ ಹೋರಾಟ ತೀವ್ರಗೊಳಿಸಲಾಗುವುದು ಎಂದು ರಾಜ್ಯ ಗಂಗಾಮತಸ್ಥರ ಸಂಘದ ನಿರ್ದೇಶಕ ಮಣ್ಣೂರು ನಾಗರಾಜ ಹೇಳಿದರು.
ಇದನ್ನೂ ಓದಿ:ಮಾದರಿ ಪರೀಕ್ಷೆಯ ಸಂಘಟನಾ ಸಮಿತಿ ಸಭೆ
ನಗರದ ಅತಿಥಿ ಗೃಹ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಂಗಾಮತಸ್ಥರ ಸಮಾಜದ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಗಂಗಾಮತಸ್ಥರ ಕುಲಕಸುಬಾದ ಮೀನುಗಾರಿಕೆಯನ್ನು ಬಲವರ್ಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಬೆಂಗಳೂರಿನಲ್ಲಿ ಸರ್ಕಾರದ ಅನುದಾನ 2.25 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ, ದೇವಸ್ಥಾನ ನಿರ್ಮಾಣ, ಕಲ್ಯಾಣ ಮಂಟಪ, ಕಚೇರಿ ಕಟ್ಟಡ ನಿರ್ಮಿಸಲಾಗಿದೆ. ಸಮಾಜದ ಸಂಘಟನೆ, ಅಭಿವೃದ್ಧಿಗೆ ನಿರಂತರ ಹೋರಾಟ ಮಾಡಲಾಗುವುದು ಎಂದರು. ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದರಿಂದ ಮಣ್ಣೂರು ನಾಗರಾಜ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಕರೆಕಲ್ ಮನೋಹರ, ಮಣ್ಣೂರು ಶಿವಪ್ಪ, ಬಿ ರಮೇಶ, ವೀರಭದ್ರಪ್ಪ, ಉಡೆಗೋಳ್ ವೆಂಕಟೇಶ, ಜೋಳಮಾರೋ ಹುಲುಗಪ್ಪ, ಮಲ್ಲಿಕಾರ್ಜುನ, ನವೀನ, ಸಂತೋಷ ಇತರರಿದ್ದರು.