

ಮಡಿಕೇರಿ:
ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಬುಧವಾರ ಭಾಗಮಂಡಲದಲ್ಲಿ ಸ್ವಚ್ಛತಾ ಕಾರ್ಯ ಮತ್ತು ರಕ್ತದಾನ ಶಿಬಿರ ನಡೆಸಲಾಯಿತು. ಈ ವೇಳೆ ಭಾಗಮಂಡಲದಿಂದ ತಲಕಾವೇರಿ ತನಕ ಮುಖ್ಯ ರಸ್ತೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ನಡೆಸಲಾಯಿತು. ನಂತರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ರಕ್ಷದಾನ ಮಾಡಿದರು. ಈ ಸಂದರ್ಭ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿರಕಜೆ ಭವನ್ ಕುಮಾರ್, ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.