ಸಂಸ್ಕೃತಿ, ಸಾಹಿತ್ಯದ ಉಳಿವಿಗೆ ಪ್ರಯತ್ನ ಅಗತ್ಯ: ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ)

CPK3
Published on

ಮೈಸೂರು: ರಾಜ್ಯದಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ಅವಲೋಕಿಸಿದರೆ ಕನ್ನಡ ನಾಡಿನಲ್ಲಿ ಕನ್ನಡ ಅಗತ್ಯವಿಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ವಿಷಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಿಮಾಲಯ ಪ್ರತಿಷ್ಠಾನದಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡ ನುಡಿ, ನೆಲ ಹಾಗೂ ಜಲದ ಪರಿಸ್ಥಿತಿ ಆತಂಕ ಎದುರಿಸುತ್ತಿದ್ದು, ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯದ ಉಳಿವಿಗಾಗಿ ಕನ್ನಡಿಗರಾದ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದರು.

ಇದಕ್ಕೆ ಪೂರಕವಾಗಿ ಕನ್ನಡದಲ್ಲಿ ಸಂವಹನ ನಡೆಸದೆ, ಅವರ ಭಾಷೆಯಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ಕನ್ನಡಿಗರಿಗೆ ಕನ್ನಡದ ಬಗ್ಗೆ ಒಲವಿರಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಸಹಕಾರ ರಘುರಾಂ ವಾಜಪೇಯಿ ಮಾತನಾಡಿದರು.

ಹಿರಿಯ ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್, ಕೆ.ರಘುರಾಂ ವಾಜಪೇಯಿ, ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ರಾಜಶೇಖರ್ ಮೆಡಿಕಲ್ ಫೌಂಡೇಶನ್ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ್, ಹಿರಿಯ ಸಮಾಜ ಸೇವಕ ಎ.ಪುಷ್ಪಾಅಯ್ಯಂಗಾರ್, ಸಹಾಯಕ ಪೊಲೀಸ್ ಅಯುಕ್ತ ಎಸ್.ಎನ್. ಸಂದೇಶ್ ಕುಮಾರ್, ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮೋಹನ್ ವೆರ್ಣೀಕರ್, ಕಾವ್ಯ ಮತ್ತು ಸಂಘಟನೆ ಕ್ಷೇತ್ರದಲ್ಲಿ ಅರಕಲಗೂಡು ನೀಲಕಂಠ ಮೂರ್ತಿ, ಉದ್ಯಮ ಮತ್ತು ಸಮಾಜ ಸೇವೆ ಕ್ಷೇತ್ರದಿಂದ ಎಂ.ಎಸ್. ರಾಮನಾಥ ಗುಪ್ತ, ರಂಗಭೂಮಿ ಕ್ಷೇತ್ರದಿಂದ ಅಡ್ಡಂಡ ಕಾರ್ಯಪ್ಪ, ಸಾಹಿತ್ಯ ಕ್ಷೇತ್ರದಿಂದ ನೀಲಕಂಠನಹಳ್ಳಿ ತಮ್ಮಣ್ಣಗೌಡ, ಶಿಕ್ಷಣ ಕ್ಷೇತ್ರದಲ್ಲಿ ಡಾ ಹನುಮಂತಚಾರ್ ಜೋಶಿ, ಯೋಗ ಕ್ಷೇತ್ರದಿಂದ ಡಾ ಸಿ.ರಮೇಶ್ ಶೆಟ್ಟಿ, ಯೋಗ ಮತ್ತು ವಿದ್ವತ್ತು ಕ್ಷೇತ್ರದಲ್ಲಿ ಎಂ.ಪಿ.ವಿಜಯ್ ಕುಮಾರ್, ಮುಕ್ತಕ ಸಾಹಿತ್ಯ ಕ್ಷೇತ್ರದಲ್ಲಿ ಮಾಲತಿ ಕೃಷ್ಣಪ್ರಸಾದ್, ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲಿ ಡಾ.ನಾರಾಯಣ ಹೆಗಡೆ, ಶಿಕ್ಷಣ ಮತ್ತು ಸೇವೆ ಕ್ಷೇತ್ರದಲ್ಲಿ ಎಂ.ಎಸ್.ನಾಗೇಶ್, ಸಾಹಿತ್ಯ ಕ್ಷೇತ್ರದಲ್ಲಿ ಎಸ್.ಉಮೇಶ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net