ಪರಿಣಾಮಕಾರಿ ಹೋರಾಟಕ್ಕೆ ಕೈಜೋಡಿಸಿ

19 GVT 04
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಎಸ್‌ಎಸ್‌ಕೆ ಸಮುದಾಯದ ಪೂರ್ವಭಾವಿ ಸಭೆ ನಡೆಯಿತು. ಎಸ್‌ಎಸ್‌ಕೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಹನುಮಂತಸಾ ನಿರಂಜನ್, ಮುಖಂಡರಾದ ಮಂಜುನಾಥ ಮಿಸ್ಕಿನ್, ಗದಗನ ರಾಘವೇಂದ್ರ ಕಬಾಡಿ, ಕಾಶಿನಾಥಸಾ ಶಿದ್ಲಿಂಗ್, ಇಳಕಲ್‌ನ ನಾಗರಾಜ ನಗರಿ, ಭಾಗ್ಯನಗರ ಸಮಾಜದ ಅಧ್ಯಕ್ಷ ಜವಾಹರಲಾಲ ಸಾ ಅಂಟಾಳಮರದ, ಎಚ್. ಕೆ. ನಿರಂಜನ, ರಾಘವೇಂದ್ರ ಕಠಾರೆ, ಲಕ್ಷ್ಮಣಸಾ ಅಂಟಾಳಮರದ ಇತರರಿದ್ದರು.
Published on

ಗಂಗಾವತಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮುದಾಯ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕಿದ್ದು, ಸರ್ಕಾರದ ಗಮನಸೆಳೆಯಲು ಹೋರಾಟದ ಅಗತ್ಯವಿದೆ ಎಂದು ಚಿಂತನ-ಮಂಥನ ಸಂಸ್ಥಾಪಕ ಹಾಗೂ ಎಸ್‌ಎಸ್‌ಕೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಹನುಮಂತಸಾ ನಿರಂಜನ್ ಹೇಳಿದರು.

ಎಸ್‌ಎಸ್‌ಕೆ ಅಭಿವೃದ್ಧಿ ನಿಗಮ ಅಸ್ತಿತ್ವದ ಹೋರಾಟದ ಕುರಿತು ತಾಲೂಕಿನ ಶ್ರೀರಾಮನಗರದ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಕೆ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮುದಾಯ ಶೈಕ್ಷಣಿಕ, ಸಾಮಾಜಿಕ , ಆರ್ಥಿಕವಾಗಿ ಹಿಂದುಳಿದಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಹೋರಾಟದ ರೂಪುರೇಷೆ, ಜಿಲ್ಲಾ ಸಮಿತಿ ರಚನೆ ಸೇರಿ ವಿಷಯಗಳ ಚರ್ಚೆಗಾಗಿ ಕೊಪ್ಪಳ ಭಾಗ್ಯನಗರದ ಗಂಗಮ್ಮ ಲಕ್ಷ್ಮಣ ಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಅ.20 ರಂದು ಜಿಲ್ಲಾ ಮಟ್ಟದ ಪೂರ್ವಭಾವಿ ಹಮ್ಮಿಕೊಳ್ಳಲಾಗಿದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕು. ಸರ್ಕಾರದ ಗಮನಸೆಳೆಯಲು ಪರಿಣಾಮಕಾರಿ ಹೋರಾಟ ನಡೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಎಸ್‌ಎಸ್‌ಕೆ ಸಮುದಾಯ ಅಧ್ಯಕ್ಷ ಪರಶುರಾಮಸಾ ಬಾಕಳೆ, ಉಪಾಧ್ಯಕ್ಷ ಲಕ್ಷ್ಮಣಸಾ ಕಾಟವಾ, ತರುಣ ಸಂಘದ ಅಧ್ಯಕ್ಷ ನಟರಾಜ ಕಬಾಡಿ, ಉಪಾಧ್ಯಕ್ಷ ಪ್ರಶಾಂತ ದಲಬಂಜನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net