ಪರಿಣಾಮಕಾರಿ ಬೋಧನೆ ಅವಶ್ಯ

4mjr1
Published on

ಮಾಂಜರಿ: ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಬೋಧನೆ ಮಾಡುವ ಮೂಲಕ ಕ್ರಿಯಾಶೀಲರನ್ನಾಗಿಸುವ ಮಹತ್ತರ ಜವಾಬ್ದಾರ ಶಿಕ್ಷಕರದ್ದಾಗಿದೆ ಎಂದು ಬಿಇಒ ಬಿ.ಎ.ಮೇಕನಮರಡಿ ಹೇಳಿದರು.

ಸಮೀಪದ ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಶಾರದಾ ಕೋರೆ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಎಸ್ಸೆಸ್ಸೆಲ್ಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಪಡೆ ಯುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪ ಪ್ರಾಚಾರ್ಯ ಜೆ.ಎಸ್.ತಮಗೊಂಡ ಅಧ್ಯಕ್ಷತೆ ವಹಿಸಿದ್ದರು. ಬಸಣ್ಣ ಅಮ್ಮಿನಬಾವಿ, ಸಂಪನ್ಮೂಲ ವ್ಯಕ್ತಿ ಟಿ.ಬಿ.ಬಡಚಿ, ಎಸ್.ಬಿ. ಕುಂಬಾರ, ವೈ.ಎಂ. ಕಾಮಣ್ಣವರ ಇತರರಿದ್ದರು. ಪ್ರಭು ಭಿರಡಿ ಸ್ವಾಗತಿಸಿದರು. ಎ.ಎಸ್. ಮಾನೆ ನಿರೂಪಿಸಿದರು. ಡಿ. ಎಸ್. ಬಾಕಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net