ಜನಸ್ಪಂದನಾ ಸಮಾವೇಶ ರಾಜಕೀಯ ಪ್ರೇರಿತವಲ್ಲ

kse
Published on

ಶಿವಮೊಗ್ಗ: ರಾಜ್ಯದ ವಿವಿಧೆಡೆ ನಡೆಸಲಾಗುತ್ತಿರುವ ಜನಸ್ಪಂದನಾ ಸಮಾವೇಶ ರಾಜಕೀಯ ಪ್ರೇರಿತವಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸ್ಪಂದನಾ ಸಮಾವೇಶವನ್ನು ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಪ್ರೇರಿತ ಎಂದಿರುವುದು ಹಾಸ್ಯಾಸ್ಪದವಾಗಿದೆ. 75 ಕೋಟಿ ರೂ. ಖರ್ಚು ಮಾಡಿ ಅವರು ದಾವಣಗೆರೆಯಲ್ಲಿ ನಡೆಸಿದ ಸಿದ್ದರಾಮೋತ್ಸವ ರಾಜಕೀಯ ಪ್ರೇರಿತ ಎಂದು ತಿರುಗೇಟು ನೀಡಿದರು.

ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಬೇಕೆಂಬ ಉದ್ಧೇಶದಿಂದ ಜನಸ್ಪಂದನಾ ಸಮಾವೇಶ ನಡೆಸಲಾಗುತ್ತಿದೆ. ಸಮಾವೇಶ ಮಾಡಿದ ಕೂಡಲೇ ಅಧಿಕಾರಕ್ಕೆ ಸಿಗುತ್ತದೆ ಎಂಬ ಭ್ರಮೆ ಸಿದ್ಧರಾಮಯ್ಯ ಅವರದ್ದು. ಸಿದ್ದರಾಮೋತ್ಸವದಂತ ನೂರಾರು ಸಮಾವೇಶವನ್ನು ಬಿಜೆಪಿ ಮಾಡಿದೆ. ಮುಂದೆಯೂ ಮಾಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net