

ಕಂಪ್ಲಿ : ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಗೆ ಕಿತ್ತೂರು ರಾಣಿ ಚನ್ನಮ್ಮಳ ಹೆಸರಿಡುವ ಮೂಲಕ ಯುವಜನತೆಯಲ್ಲಿ ಸ್ಫೂರ್ತಿ ತುಂಬುವಲ್ಲಿ ಪುರಸಭೆ ಆಡಳಿತ ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಎಸ್.ಚಂದ್ರಶೇಖರಗೌಡ ಒತ್ತಾಯಿಸಿದರು.
ಇಲ್ಲಿನ ಪುರಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮಳ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಚನ್ನಮ್ಮಳ ವೃತ್ತ ನಿರ್ಮಿಸಬೇಕು. ಕಿತ್ತೂರು ರಾಣಿ ಚನ್ನಮ್ಮಳ ಪ್ರತಿಮೆಯನ್ನು ಸರ್ಕಾರವೇ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ದೇಶದ ಸ್ವತಂತ್ರ್ಯಕ್ಕಾಗಿ ಧ್ವನಿ ಎತ್ತಿದ ಮೊದಲ ಮಹಿಳೆಯಾಗಿದ್ದು, ಈಕೆಯ ದೇಶಪ್ರೇಮ ಆದರ್ಶವಾಗಿದೆ ಎಂದರು.
ಇದಕ್ಕೂ ಮೊದಲು ತಾಲೂಕು ಕಚೇರಿ ಸಭಾಂಗಣದಲ್ಲಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಪಿ.ಮೂಕಯ್ಯಸ್ವಾಮಿ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಇಟ್ಗಿ ಬಸವರಾಜಗೌಡ, ಜಿ.ಜಿ.ಆನಂದಮೂರ್ತಿ, ಎಚ್.ರಾಜಶೇಖರಗೌಡ, ಬಿ.ವಿ.ಗೌಡ, ಬಳೆ ಮಲ್ಲಿಕಾರ್ಜುನ, ಎಸ್.ಡಿ.ಬಸವರಾಜ, ಸಿ.ಶರಣಗೌಡ, ಜಿ.ಈಶಪ್ಪ, ಕನಕಗಿರಿ ರೇಣುಕಪ್ಪ, ಯು.ಎಂ.ವಿದ್ಯಾಶಂಕರ್, ಟಿ.ಶರಣಪ್ಪ, ಮುಕ್ಕುಂದಿ ಶಿವಗಂಗಮ್ಮ, ಬಿ.ಪಾರ್ವತಮ್ಮ, ಕಲ್ಗುಡಿ ಚನ್ನಮ್ಮ, ವಸ್ತ್ರದ ಶಾಂತಮ್ಮ, ಜಡೆಯ್ಯಸ್ವಾಮಿ, ಶಿರಸ್ತೆದಾರ್ ಜಿ.ಪಂಪಾಪತಿ, ಆರ್‌ಐ ಎ.ಗಣೇಶ್ ಇತರರಿದ್ದರು.