ಶೈಕ್ಷಣಿಕ ಸಮಾವೇಶ

Published on

ಹುಬ್ಬಳ್ಳಿ: ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ವತಿಯಿಂದ ಮಹಾಮಂಡಳಿಯ ಸಂಸ್ಥಾಪನಾ ಅಧ್ಯಕ್ಷ ದಿ. ಜಿ.ಎಸ್. ಶರ್ಮಾ ಜನ್ಮಶತಾಬ್ದಿ ವರ್ಷಾಚರಣೆ ನಿಮಿತ್ತ ಶೈಕ್ಷಣಿಕ ಸಮಾವೇಶವನ್ನು ಇಲ್ಲಿಯ ಉಣಕಲ್ಲ ನವೀನ್ ಹೋಟೆಲ್ ನಲ್ಲಿ ಮಾರ್ಚ್ 1ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಅನುದಾನ ರಹಿತ ಶಾಲೆ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಚಿಂತಕರು, ಶಾಲೆಗಳ ಮುಖ್ಯಸ್ಥರು ಭಾಗವಹಿಸಬೇಕೆಂದು ಮಹಾಮಂಡಳ ಕಾರ್ಯಕಾರಿ ಸಮಿತಿಯ ವಿಶ್ವನಾಥ ರಾನಡೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net