ಅಕ್ಟೋಬರ್ 7 ರಂದು ‘ಎಜು ಫ್ಲರಿಶ್’ ಲೋಗೋ ಬಿಡುಗಡೆ

edu
ಮಂಗಳೂರು ಪತ್ರಿಕಾಭವನದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ‘ಎಜು ಫ್ಲರಿಶ್’ ಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ದೀಪಾಲಿ ಶೆಣೈ ಮಾಹಿತಿ ನೀಡಿದರು. ಸಹಾಯಕ ಕಾರ್ಯಾಚರಣೆ ವ್ಯವಸ್ಥಾಪಕರಾದ ಸಚಿತ್ ಪೈ, ಟೀನಾ ರೆಬೆಲ್ಲೊ, ಐಟಿ ಅಡ್ಮಿನ್ ಸಾಥ್ವಿಕ್ ಎಚ್.ವಿ ಉಪಸ್ಥಿತರಿದ್ದರು.
Published on

ಮಂಗಳೂರು: ಶೈಕ್ಷಣಿಕ ಸಂಸ್ಥೆಗಳ ಆಡಳಿತಾತ್ಮ ಕ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವ ಮೂಲಕ ಮರುರೂಪಿಸುವ ಉದ್ದೇಶ ಹೊಂದಿರುವ ‘ಎಜು ಫ್ಲರಿಶ್’ ಶೈಕ್ಷಣಿಕ ನಿರ್ವಹಣಾ ಕಂಪನಿಯ ಲಾಂಛನ ಅನಾವರಣ ಅಕ್ಟೋಬರ್ 7 ರಂದು ಸಂಜೆ 5 ಕ್ಕೆ ನಗರದ ಎ.ಜೆ.ಗ್ರಾೃಂಡ್ ನಲ್ಲಿ ನಡೆಯಲಿದೆ.
ಎಜೆ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ , ಆಳ್ವಾಸ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ , ಭಾರತ್ ಅಕಾಡೆಮಿ ಟ್ರಸ್ಟಿ, ಭಾರತ್ ಅಕಾಡೆಮಿ ಮ್ಯಾನೇಜಿಂಗ್ ಟ್ರಸ್ಟಿ ಡಾ. ವಿಂಧ್ಯಾ ಪೈ, ಬೆಸೆಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಮಣೆಲ್ ಅಣ್ಣಪ್ಪ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ‘ಎಜು ಫ್ಲರಿಶ್’ ಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ದೀಪಾಲಿ ಶೆಣೈ ಶನಿವಾರ ನಗರದ ಪತ್ರಿಕಾಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17 ವರ್ಷಗಳ ಅನುಭವ ಹೊಂದಿರುವ ಕಂಪನಿಯು ನಾಡಿನ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು, ಸಶಕ್ತಗೊಳಿಸಲು ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ ಸಂಸ್ಥೆಯಲ್ಲಿ ಕಲಿಕೆಯ ಪರಿಸರವನ್ನು ಸುಧಾರಿಸುವುದು, ಆಡಳಿತವನ್ನು ಸುಗಮಗೊಳಿಸುವುದು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವುದು ಆಗಿದೆ ಎಂದು ಅವರು ವಿವರಿಸಿದರು.
ಸಂಸ್ಥೆಗಳಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವ ಮೇಲೆ ಗಮನ ಕೇಂದ್ರೀಕರಿಸುವುದು ಆವಶ್ಯಕ. ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದರಿಂದ ಶಿಕ್ಷಕರು ಮತ್ತು ನಿರ್ವಾಹಕರ ಕೌಶಲ ಸುಧಾರಿಸುತ್ತದೆ. ಹಣಕಾಸು ಯೋಜನೆ ಮತ್ತು ನಿರ್ವಹಣೆಯು ಮುಂಚೂಣಿಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಗಳು ತಮ್ಮ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳಲು ಮತ್ತು ಸುಸ್ಥಿರ ಆರ್ಥಿಕ ಮಾದರಿಗಳನ್ನು ನಿರ್ಮಿಸಲು ‘ಎಜು ಫ್ಲರಿಶ್’ ಮಾರ್ಗದರ್ಶನ ನೀಡುತ್ತವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಕಾರ್ಯಾಚರಣೆ ವ್ಯವಸ್ಥಾಪಕರಾದ ಸಚಿತ್ ಪೈ, ಟೀನಾ ರೆಬೆಲ್ಲೊ, ಐಟಿ ಅಡ್ಮಿನ್ ಸಾಥ್ವಿಕ್ ಎಚ್.ವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net