ಹೆಚ್ಚುತ್ತಿದೆ ತಂತ್ರಜ್ಞಾನಗಳ ದುರ್ಬಳಕೆ

Mobile
Published on

ಬ್ಯಾಪ್ಟಿಸ್ಟ್​ ಬ್ಯಾಡ್ಮಿಂಟನ್​ ಅಕಾಡೆಮಿಯ ಗಣೇಶ ಕುಡ್ವ ಕಳವಳ

'ಯುವ ಜನತೆ ಮತ್ತು ಮೊಬೈಲ್​ ಬಳಕೆ' ಶೈಕ್ಷಣಿಕ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ನಾವೆಲ್ಲರೂ ಇಂದು ಡಿಜಿಟಲ್​ ಯುಗದಲ್ಲಿದ್ದು ನಮ್ಮನ್ನು ತಂತ್ರಜ್ಞಾನದ ದಾಸರನ್ನಾಗಿಸಿದೆ. ಅಲ್ಲದೆ, ಇಂಟರ್ನೆಟ್ ಹಾಗೂ ಮೊಬೈಲ್​ ತಂತ್ರಜ್ಞಾನದ ದುರ್ಬಳಕೆಯೂ ಹೆಚ್ಚಾಗುತ್ತಿದ್ದು, ಯುವಜನತೆ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಸೂಕ್ತ ಎಂದು ಬ್ಯಾಪ್ಟಿಸ್ಟ್​ ಬ್ಯಾಡ್ಮಿಂಟನ್​ ಅಕಾಡೆಮಿಯ ಗಣೇಶ ಕುಡ್ವ ಕಳವಳ ವ್ಯಕ್ತಪಡಿಸಿದರು.

ಉಡುಪಿಯ ತೆಂಕನಿಡಿಯೂರುನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯುಎಸಿ ವತಿಯಿಂದ ಆಯೋಜಿಸಿದ್ದ ಯುವ ಜನತೆ ಮತ್ತು ಮೊಬೈಲ್​ ಬಳಕೆ ಎಂಬ ಶೈಕ್ಷಣಿಕ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಯೂಲ ವ್ಯಕ್ತಿಯಾಗಿ ಮಾತನಾಡಿದರು.

ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ

ಕಾರ್ಯಕ್ರಮದ ಸಂಯೋಜಕ ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ. ಯುವಜನತೆ ಸಂಸ್ಕಾರವಂತರೂ, ಗುಣಶೀಲರೂ ಆಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್​ ಮಾತನಾಡಿ, ಮೊಬೈಲ್​ ದುರ್ಬಳಕೆಯ ಮೂಲಕ ವಿದ್ಯಾರ್ಥಿಗಳು ದಾರಿತಪ್ಪುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಐಕ್ಯುಎಸಿ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜಕುಮಾರ್​ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಹಾಗೂ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಶ್ರೀಧರ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಖ್ಯಾಶಾಸ್ತ್ರದ ಸಹ ಪ್ರಾಧ್ಯಾಪಕ ಉಮೇಶ ಪೈ ವಂದಿಸಿದರು. ಪ್ರಥಮ ವರ್ಷದ ಪದವಿ ತರಗತಿಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net