ಶೈಕ್ಷಣಿಕ ವಿಕಾಸಕ್ಕೆ ನಿರಂತರ ಅಧ್ಯಯನ ಅತ್ಯವಶ್ಯ

21 Dwd 7
Published on

ಧಾರವಾಡ: ನಿರಂತರ ಅಧ್ಯಯನ ಕ್ರಮದಿಂದ ಶೈಕ್ಷಣಿಕ ವಿಕಾಸ ಸಾಧ್ಯ. ಹೊಸತನ್ನು ಕಲಿಯುವ ಆಸಕ್ತಿ ಇರುವವರೆಗೂ ಎಲ್ಲರೂ ಯುವಕರೇ ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಂಸ್ಥೆಯ ಅಧ್ಯಕ್ಷ ವಿ. ಮುರಳೀಧರನ್ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಕಾಯÁðಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಕಾಯÁðಗಾರವು ಪ್ರಾಧ್ಯಾಪಕರಿಗೆ ಕೇವಲ 2 ದಿನಗಳ ಶೈಕ್ಷಣಿಕ ಕಸರತ್ತು ಆಗದೆ, ಮುಂದಿನ ಬದುಕಿಗೆ ದಾರಿದೀಪವಾಗಬೇಕು ಎಂದರು.
ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಏಳ್ಗೆಯಲ್ಲಿ ಅಧ್ಯಾಪಕರ ಕೊಡುಗೆ ಮಹತ್ವದ್ದಾಗಿರುತ್ತದೆ. ಎಲ್ಲ ಭಾಷೆಗಳ ಅರಿವು ಇರಬೇಕು. ಅಧ್ಯಾಪಕರು ಆರಾಮ ವಲಯದಿಂದ ಹೊರಬಂದು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಮದ್ರಾಸ್‌ನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಪ್ರೊ. ಪಿ. ರಾಽಕಾ ಮಾತನಾಡಿದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಧಾರವಾಡದ ಅಧ್ಯಕ್ಷ ರಾಘವೇಂದ್ರ ತವನಪ್ಪನವರ, ಕಾರ್ಯಾಧ್ಯಕ್ಷ ಈರೇಶ ಬಿ. ಅಂಚಟಗೇರಿ, ಕೋಶಾಧ್ಯಕ್ಷ ಜಗದೀಶ ಮಳಿಗಿ, ಕಾರ್ಯದರ್ಶಿ ಎಸ್. ರಾಧಾಕೃಷ್ಣನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಿ.ಜಿ. ಹಿರೇಮಠ, ನಾರಾಯಣ ಮೋರೆ, ಸಂತೋಷ ಒಂದಕುದರಿ, ಶ್ರೀಶೈಲ ಯಕ್ಕುಂಡಿಮಠ, ಅಶೋಕ ಶೆಟ್ಟರ, ಪ್ರೊ. ಎಸ್.ಬಿ. ಹಿಂಚಿಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net