

ಹುಬ್ಬಳ್ಳಿ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಧಾರವಾಡ ಜಿಲ್ಲಾ ಪ್ರಾಚಾರ್ಯರ ಸಂಘದ ಆಶ್ರಯದಲ್ಲಿ ನಗರದ ಬಿವಿಬಿಯ ಬಯೋಟಿಕ್ ಹಾಲ್ನಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಸೋಮವಾರದಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ರ ಜನ್ಮದಿನೋತ್ಸವ ಹಾಗೂ ಶೈಕ್ಷಣಿಕ ಕಾರ್ಯಾಗಾರ ನಡೆಸಿದರು.
ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಕ್ರಿಯಾಶೀಲತೆ ಅಗತ್ಯ ಎಂದರು.
ಉಪನ್ಯಾಸ ನೀಡಿದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ್, ಶಿಕ್ಷಕರ ಮಹತ್ವ, ಬದ್ದತೆ, ಸಮಯ ಪಾಲನೆ, ಪಠ್ಯೇತರ ಆಲೋಚನೆಗಳು ಮುಂತಾದ ವಿಷಯಗಳು ಸಮಗ್ರ ಅಭಿವೃದ್ಧಿಗೆ ಸಹಾಯಕವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕ ಕೆ.ಪಿ. ಸುರೇಶ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಫಲಿತಾಂಶ ಸುಧಾರಣೆಗೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳವಿಕೆ ಅನಿವಾರ್ಯ ಎಂದು ಹೇಳಿದರು.
ಪ್ರಾರ್ಚಾರ್ಯರಾದ ಅಶೋಕ ಸವಣೂರ, ವಿ.ಆರ್. ವಾಘ್ಮೂೕಡೆ, ಟಿ.ಪಿ.ನಾರಾಯಣಕರ್, ಎಸ್. ಶ್ರೀಕಾಂತ ಉಪಸ್ಥಿತರಿದ್ದರು.
ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಿ. ಹನಮಂತಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ ಬೂದಿಹಾಳ ಪರಿಚಯಿಸಿದರು. ಎಫ್. ಬಿ. ಸೊರಟೂರ ನಿರೂಪಿಸಿದರು. ಅನಂದ ಮುಳಗುಂದ ವಂದಿಸಿದರು.