ಮಾದಯ್ಯ ಕುಲಪತಿಯಾಗಿದ್ದಾಗ ಶೈಕ್ಷಣಿಕ ಕ್ರಾಂತಿ

6
Published on

ಮೈಸೂರು: ಪ್ರೊ.ಎಂ.ಮಾದಯ್ಯ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯಿತು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸ್ಮರಿಸಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ಮೈವಿವಿ ಸ್ನಾತಕ ಗ್ರಂಥಾಲಯವು ಮಹಾರಾಜ ಕಾಲೇಜು ಸ್ನಾತಕ ಗ್ರಂಥಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರೊ.ಎಂ.ಮಾದಯ್ಯ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಖಾಲಿ ಹುದ್ದೆಗಳ ನೇಮಕಾತಿ, ಶೈಕ್ಷಣಿಕ ಗುಣಮಟ್ಟದಲ್ಲಿ ಮಾದಯ್ಯ ಅವರ ಕಾಲದಲ್ಲಿ ಕ್ರಾಂತಿಯೇ ಆಯಿತು. ಇದರಿಂದ ಮೈಸೂರು ವಿವಿಗೆ ಒಳ್ಳೆಯ ಹೆಸರು ಬಂದಿತು. ಮತ್ತೆ ಆ ದಿನಗಳು ಬರುವ ರೀತಿಯಲ್ಲಿ ಕೆಲಸ ಮಾಡಬೇಕಿದೆ. ನಾನು ಕೂಡ ಅವರು ಸಾಗಿದ ದಾರಿಯಲ್ಲಿ ಹೋಗಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಮಾನಸ ಗಂಗೋತ್ರಿಯಲ್ಲಿ ಸೆನೆಟ್ ಭವನ, ಗಂಗೋತ್ರಿ ಗ್ಲೇಡ್ಸ್ ನಿರ್ಮಾಣಕ್ಕೆ ಮಾದಯ್ಯ ಅವರು ಕಾರಣ. ಅದೇ ರೀತಿ ಹಾಸನ, ಮಂಡ್ಯ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಿ, ಈಗ ಅವು ವಿವಿಗಳಾಗಿವೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಕೂಡ ಅವರ ಕುಲಪತಿಯಾಗಿದ್ದ ಅವಧಿಯಲ್ಲಿಯೇ ಮೈಸೂರು ವಿವಿಯಿಂದ ಪ್ರತ್ಯೇಕವಾಗಿ ರಚನೆಯಾಯಿತು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net