

ಮುದ್ದೇಬಿಹಾಳ: ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಮಾದರಿ ಕಾರ್ಯವಾಗಿದೆ ಎಂದು ಜಮಖಂಡಿ ಓಲೇಮಠದ ನೂತನ ಪೀಠಾಧಿಪತಿ ಆನಂದ ದೇವರು ಹೇಳಿದರು.
ಮುದ್ದೇಬಿಹಾಳ ತಾಲೂಕು ಹುಲ್ಲೂರ ಬಳಿಯ ಚನ್ನಬಸವಶ್ರೀ ಎಜ್ಯುಕೇಷನ್, ರೂರಲ್, ಕಲ್ಚರಲ್ ಸೊಸೈಟಿಯ ಎಸ್‌ಎನ್‌ಡಿ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಲಿಂ. ಡಾ.ಅಭಿನವಕುಮಾರ ಚನ್ನಬಸವ ಮಹಾಸ್ವಾಮಿಯವರ ನುಡಿನಮನ, ವಾರ್ಷಿಕ ಸ್ನೇಹ ಸಮ್ಮೇಳನ, ಹತ್ತು ಸಾಧಕರಿಗೆ ಚನ್ನಬಸವಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಇಂಥ ಸಮಾಜಮುಖಿ ಚಟುವಟಿಕೆ ನಡೆಸುತ್ತಿರುವುದು ಇತರರಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಮಂಜುನಾಥ ಕೊಪ್ಪ ಮಾತನಾಡಿ, ಲಿಂ. ಡಾ.ಅಭಿನವಕುಮಾರ ಚನ್ನಬಸವ ಮಹಾಸ್ವಾಮಿಗಳ ಆಶಯದಂತೆ ಪ್ರತಿವರ್ಷವೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಹೆಚ್ಚು ಗುರುತಿಸಿಕೊಳ್ಳದೆ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಪೂಜ್ಯರ ಹೆಸರಿನಲ್ಲಿಯೇ ಪ್ರಶಸ್ತಿ ನೀಡುವುದು ಹೆಚ್ಚು ಸಂತೃಪ್ತಿ ನೀಡುತ್ತದೆ. ಹಳ್ಳಿಯ ಮಕ್ಕಳು ಪಟ್ಟಣಕ್ಕೆ ಹೋಗಿ ಓದಲು ಪಡುತ್ತಿರುವ ಬವಣೆ ಕಂಡು ಈ ಶಾಲೆ ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇನೆ. ಸಾಧಕರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.
ಯರಝರಿ ಯಲ್ಲಾಲಿಂಗಮಠದ ಶ್ರೀ ಮಲ್ಲಾಲಿಂಗಮಹಾಪ್ರಭುಗಳು, ಇಟಗಿ ಮೇಲಗದ್ದುಗೆ ಭೂಕೈಲಾಸಮಠದ ಗುರುಶಾಂತವೀರ ಶಿವಾಚಾರ್ಯರು, ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಮಾತನಾಡಿದರು.
ಗಣ್ಯರಾದ ಮಹಾದೇವಪ್ಪಯ್ಯ ವಿಶ್ವಕರ್ಮ, ಸುರೇಶಗೌಡ ಬೆಂಗಳೂರು (ಹಿರೇಮಠ), ಪ್ರಭುಗೌಡ ದೇಸಾಯಿ, ಎಂ.ಡಿ. ಮೈತ್ರಿ, ಮಹಿಬೂಬ ಗೊಳಸಂಗಿ, ಕಾಮರಾಜ ಬಿರಾದಾರ, ಬಿ.ಕೆ. ಬಿರಾದಾರ, ಮುತ್ತಣ್ಣ ಹುಗ್ಗಿ, ಜಾವೀದ್ ಇನಾಮದಾರ, ನೈನಾ ಚವ್ಹಾಣ, ಗೀತಾ ಬಿದ್ನಾಳ, ಕರಿಯಪ್ಪ ಆಸಂಗಿ, ಮಹಾದೇವಪ್ಪ ಹಳ್ಳದ, ಬೆಳ್ಳಪ್ಪ ಮೇಟಿ, ಸಂತೋಷ ಜಾಧವ, ಗುಂಡು ಚವ್ಹಾಣ, ವೀರೇಶ ಗುರುಮಠ, ಸಂಸ್ಥೆ ಸದಸ್ಯರು, ಸಿಬ್ಬಂದಿ, ಪಾಲಕರು ಇದ್ದರು.
ವಿವಿಧ ಕ್ಷೇತ್ರಗಳ ಸಾಧಕರಾದ ಸಿದ್ದನಗೌಡ ಮಂಗಳೂರು, ಚೇತನ ಶಿವಶಿಂಪಿ, ಅನಿಲಕುಮಾರ ತೇಲಂಗಿ, ಪ್ರಶಾಂತ ಕಾಳೆ, ಶಿವಾನಂದ ವಾಲಿ, ಹೇಮಾ ಬಿರಾದಾರ, ಎಸ್.ಎಚ್. ಲೊಟಗೇರಿ ವಕೀಲರು, ಎಂ.ಡಿ. ಆನಂದ, ಸುಮಲತಾ ಗಡಿಯಪ್ಪನವರ ಮತ್ತು ದಂಪತಿ ಸಮೇತ ಡಾ. ಚಂದ್ರಶೇಖರ ಶಿವಯೋಗಿಮಠ ಇವರಿಗೆ ಚನ್ನಬಸವಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಕ್ಷಕ ಅಶೋಕ ಗುಂಡಿನಮನಿ, ಮುಖ್ಯಾಧ್ಯಾಪಕಿ ರೇಖಾವತಿ ದೇವೂರ ನಿರ್ವಹಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.