

ನಂದೇಶ್ವರ: ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗುತ್ತಿದ್ದು, ಹಣ ಸಂಪಾದನೆಗಾಗಿಯೇ ಶಿಕ್ಷಣ ಸಂಸ್ಥೆ ತೆರೆಯಬಾರದು. ಎಲ್ಲರಿಗೂಶಿಕ್ಷಣ ಸಿಗುವಂತೆ ಪ್ರಜ್ಞಾವಂತರು ನೋಡಿಕೊಳ್ಳಬೇಕೆಂದು ನದಿ ಇಂಗಳಗಾಂವ ಗ್ರಾಮದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗ್ರಾಮದ ಆರ್.ಎಸ್.ಪೂಜಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುಗೌರವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸುವುದು ಶ್ರೇಷ್ಠ ಕಾರ್ಯ. ರಾಜನಿಗೆ ರಾಜ್ಯದಲ್ಲಿ ಮಾತ್ರ ಗೌರವ ದೊರೆತರೆ ವಿದ್ಯಾವಂತನಿಗೆ ಎಲ್ಲೆಡೆ ದೊರೆಯುತ್ತದೆ. ಶಿಕರು ಗೌರವ ದೊರೆಯುವಂತೆ ಬದುಕಬೇಕೆಂದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಮಾತನಾಡಿ, ಶಿಕರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಸಮನ್ವಯಾಧಿಕಾರಿ ಗೌಡಪ್ಪ ಖೋತ ಹಾಗೂ ಶಿಕ್ಷಕ ದುಂಡಯ್ಯ ಹಿರೇಮಠ ಮಾತನಾಡಿದರು. ವಿವಿಧ ಶಾಲೆಯ ಶಿಕ್ಷಕರಿಗೆ ಗುರು ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿಆರ್ಪಿ ಎ.ವೆ.ಹೈಬತ್ತಿ, ಸಿಆರ್ಪಿ ರವೀಂದ್ರ ಹಳ್ಳೋಳ್ಳಿ, ಭೀಮಪ್ಪ ಪೂಜಾರಿ, ಮಹಾಂತೇಶ ಪೂಜಾರಿ, ಬಸವರಾಜ ಮಡಿವಾಳ, ರಾಮಪ್ಪ ಪೂಜಾರಿ, ಬಂದೇನವಾಜ್ ಮುಲ್ಲಾ, ಗುಂಡೂರಾವ ಕಾಂಬಳೆ, ವಿಶ್ವನಾಥ ಅಂಗಡಿ, ಬಂದೇನವಾಜ್ ಅತ್ತಾರ, ಶಿವು ಪೂಜಾರಿ, ಸುಜಾತಾ ಪೂಜಾರಿ, ಹಣಮಂತ ಜಗದೇವ, ಶ್ರೀಪತಿ ಕಾಂಬಳೆ ಇತರರಿದ್ದರು. ಬಸವರಾಜ ಮಡಿವಾಳ ನಿರೂಪಿಸಿ ವಂದಿಸಿದರು.