ಕಲಿಕೆಯೊಂದಿಗೆ ಪ್ರಾಯೋಗಿಕ ಜ್ಞಾನ ಅವಶ್ಯ

visit
Published on

ಹೆಬ್ರಿ: ಕಲಿಕೆ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಕಲಿಕೆ ಪುಸ್ತಕಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಜ್ಞಾನ ಅವಶ್ಯ ಎಂದು ಕನ್ಯಾನ ರೈತ ಸೇವಾ ಗ್ರಾಮೋದ್ಯೋಗದ ಮಾಲೀಕ ಕನ್ಯಾನ ಲಕ್ಷ್ಮೀನಾರಾಯಣ ನಾಯಕ್ ಹೇಳಿದರು.

ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜು ವ್ಯವಹಾರ ಆಡಳಿತದ ವಿಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಕೈಗಾರಿಕಾ ಭೇಟಿ ಕಾರ್ಯಕ್ರಮದಲ್ಲಿ ಗುರುವಾರ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಉಪನ್ಯಾಸಕ ರಾಜೇಶ್ ಮಾತನಾಡಿ, ಸಂಸ್ಥೆ ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಇಂತಹ ಉದ್ಯಮಿಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಬೇಕೆಂದು ಹೇಳಿದರು. ಉಪನ್ಯಾಸಕರಾದ ಅರುಣ್ ಕುಮಾರ್ ಕೆ., ರಾಜೇಶ್, ಮಂಜುಳಾದೇವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net