ಶೈಕ್ಷಣಿಕ ಸುಧಾರಣೆಗೆ ಭಾಷೆ ಹಿಡಿತ ಅಗತ್ಯ

23Ravig5
ಕಾಕತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಬಸವರಾಜ ಮಿಲ್ಲಾನಟ್ಟಿ ಮಾತನಾಡಿದರು. ಸುರೇಶ ಹಂಜಿ, ಎಸ್.ಪಿ. ದಾಸಪ್ಪನವರ, ಆರ್.ಟಿ.ಬಳಿಗಾರ, ಅಶೋಕ ಖೋತ, ದೀಪಾ ನಾಯಕ, ಚಂದ್ರಶೇಖರ ಪೂಜಾರ, ರಾಮು ಗುಗ್ಗವಾಡ, ಎಂ.ಎ ಕೋರಿಶೆಟ್ಟಿ, ಬಿ ಎನ್.ಮಡಿವಾಳರ, ಗೀತಾ ಖಾನಟ್ಟಿ, ಶಶಿಕಲಾ ಹೊಸೂರ, ನೀತಾ ಯಲಜಿ ಇದ್ದರು.
Published on

ಬೆಳಗಾವಿ: ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿ ಮಗುವಿಗೆ ಕನ್ನಡ ಭಾಷಾ ವಿಷಯದಲ್ಲಿ ಹಿಡಿತವಿದ್ದರೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಭಾಷಾ ಶಿಕ್ಷಕರು ಭಾಷೆಯ ಭದ್ರಬುನಾದಿ ಹಾಕುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಡಿಡಿಪಿಐ ಬಸವರಾಜ ನಾಲತವಾಡ ಹೇಳಿದರು.

ತಾಲೂಕಿನ ಕಾಕತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ವಲಯದ ಕನ್ನಡ ಭಾಷಾ ಶಿಕ್ಷಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ವಿಷಯಾಧರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಗುವಿನ ಭಾಷಾ ಕೌಶಲ ವೃದ್ಧಿ ಜತೆಗೆ ಮಗುವಿಗೆ ಕುತೂಹಲ ಬೆಳೆಸುವ, ಪ್ರಾಯೋಗಿಕ ಜ್ಞಾನ ನೀಡುವ ಮತ್ತು ಆಸಕ್ತಿ ಕೆರಳಿಸುವ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ತಾಲೂಕು ಅಧ್ಯಕ್ಷ ಸುರೇಶ ಹಂಜಿ ಮಾತನಾಡಿ, ಮಕ್ಕಳಲ್ಲಿ ಕನ್ನಡತನ ಗಟ್ಟಿಗೊಳಿಸಬೇಕು. ಗಡಿಭಾಗದಲ್ಲಿ ಕನ್ನಡ ಬೆಳೆಸುವ ಕೈಂಕರ್ಯದಲ್ಲಿ ಭಾಷಾ ಶಿಕ್ಷಕರು ತೊಡಬೇಕು ಎಂದರು.

ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಮಿಲ್ಲಾನಟ್ಟಿ ಮಾತನಾಡಿ, ಭಾಷಾ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ಮಗುವಿನ ಸಂಪೂರ್ಣ ಶೈಕ್ಷಣಿಕ ವೃದ್ಧಿಗೆ ವ್ಯಾಕರಣಬದ್ಧವಾದ ಕನ್ನಡ ಭಾಷೆ ಕಲಿಸಲು ಕಾಳಜಿ ವಹಿಸಬೇಕು ಎಂದರು.

ಮುಖ್ಯಾಧ್ಯಾಪಕ ಅಶೋಕ ಖೋತ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಪಿ. ದಾಸಪ್ಪನವರ, ಆರ್.ಟಿ.ಬಳಿಗಾರ, ಕನ್ನಡ ಭಾಷಾ ನೋಡಲ್ ಅಧಿಕಾರಿ ದೀಪಾ ನಾಯಕ, ಚಂದ್ರಶೇಖರ ಪೂಜಾರ, ರಾಮು ಗುಗ್ಗವಾಡ, ಎಂ.ಎ ಕೋರಿಶೆಟ್ಟಿ, ಬಿ ಎನ್.ಮಡಿವಾಳರ, ಗೀತಾ ಖಾನಟ್ಟಿ, ಶಶಿಕಲಾ ಹೊಸೂರ, ನೀತಾ ಯಲಜಿ, ಕುಮಾರ ಪಾಟೀಲ, ಜಮುನಾ ಕೋಳಿ, ಕೃಷ್ಣ ಕುರುಬರ ಇದ್ದರು. ಶಿವಾನಂದ ತಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಲಲಿತಾ ಮಹಾಜನಶೆಟ್ಟಿ ಸ್ವಾಗತಿಸಿದರು. ಸುಮಿತ್ರಾ ಕರವಿನಕೊಪ್ಪ ನಿರೂಪಿಸಿದರು ಮಹೇಶ ಅಕ್ಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net