

ಸವದತ್ತಿ: ವಿದ್ಯಾರ್ಥಿಗಳು ಶೈಕ್ಷಣಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಪ್ರಾಚಾರ್ಯ
ಬಿ.ಕೆ.ಕಠಾರೆ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್. ವಿ. ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಾಣಿಜ್ಯ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳಲ್ಲಿ ವಿಮೆ ಹಣ ಹಾಗೂ ವಾಣಿಜ್ಯ ಕ್ಷೇತ್ರಗಳ ವಿವಿಧ ವಿಷಯಗಳು ಪರಿಣಾಮಕಾರಿಯಾಗಿವೆ ಎಂದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸ್ವತಃ ತಯಾರಿಸಿದ ತಿಂಡಿ ತಿನಿಸು ಮಾರಾಟ ಮಾಡುವ ಮೂಲಕ ಪ್ರಾಯೋಗಿಕ ವ್ಯವಹಾರದ ಅನುಭವ ಪಡೆದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿಗೆ ಆಯ್ಕೆಯಾದ ವಿದ್ಯಾರ್ಥಿನಿ ಮಧು ಶಿರಕೋಳ ಅವರನ್ನು ಸನ್ಮಾನಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಉಮೇಶ ಬಾಳಿ, ಪ್ರಾಚಾರ್ಯ ಡಾ.ಎನ್.ಆರ್.ಸವತೀಕರ, ಪ್ರೊ.ಕೆ.ರಾಮರೆಡ್ಡಿ, ಎ.ಎ.ಹಳ್ಳೂರ, ಡಾ.ಎ.ಎ್. ಬಾದಾಮಿ, ಎ.ಎ. ಹಳ್ಳೂರ, ವಿ.ಎಸ್.ಮೀಶಿ, ಡಾ.ಎನ್.ಎ.ಕೌಜಗೇರಿ, ಎಂ.ಸಿ. ಹಾದಿಮನಿ, ಮೋಹನ ಬಿ., ಅಮೃತ ಹೂಗಾರ, ಬಿ.ಎಲ್. ರಾಯನಗೌಡರ, ಕೆ.ಬಿ.ನರಗುಂದ, ಎಸ್.ಜೆ.ಮಜ್ಜಗಿ, ಎಸ್.ಎ. ಪಮ್ಮಾರ, ವಚನಾ ಬಸಿಡೋಣಿ, ಪ್ರೇಮಾ ಕ್ಕೀರಶೆಟ್ಟಿ, ಪೂಜಾ ಚಿಟ್ಟಿ ಇತರರಿದ್ದರು.