ಶಿಕ್ಷಣದ ಜತೆಗೆ ಅಪೌಷ್ಟಿಕತೆ ನಿವಾರಣೆ

30SND-01
ಸಿಂಧನೂರಿನ ಪಿಡಬ್ಲ್ಯುಡಿಕ್ಯಾಂಪ್‌ನ ಸರ್ಕಾರಿ ಬಾಲಕರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಶಾಸಕ ಹಂಪನಗೌಡ ಬಾದರ್ಲಿ ಮೊಟ್ಟೆ ವಿತರಿಸಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಪ್ರಭಾರ ಬಿಇಒ ವಾಜೀದಾ ಮಾಜೀದ್, ಎಸ್ಡಿಎಂಸಿ ಅಧ್ಯಕ್ಷ ಭೀಮರಡ್ಡಿ, ಬಿಸಿಯೂಟ ಅಧಿಕಾರಿ ಸಾಬಣ್ಣ ಇದ್ದರು.
Published on

ಸಿಂಧನೂರು: ನಗರದ ಹಳೆಯ ಸರ್ಕಾರಿ ಬಾಲಕರ ಪ್ರೌಢ ಶಾಲೆ ಕಟ್ಟಡವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ದುರಸ್ತಿಯೊಂದಿಗೆ ಪೀಠೋಪಕರಣ ಸೇರಿ ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಪಿಡಬ್ಲ್ಯುಡಿ ಕ್ಯಾಂಪ್‌ನ ಸರ್ಕಾರಿ ಬಾಲಕರ ಪ್ರೌಢ ಶಾಲಾ ಆವರಣದಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ರಾಜ್ಯ ಸರ್ಕಾರದ ಅಕ್ಷರ ದಾಸೋಹ ಮಧ್ಯಾಹ್ನದ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಅಪೌಷ್ಟಿಕತೆ ಹೊಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅಜೀಂ ಪ್ರೇಮ್‌ಜೀ ಫೌಂಡೇಷನ್ ಲಾಭಾಂಶದಲ್ಲಿ ಶೇ.2 ರಷ್ಟು ಸಮಾಜಮುಖಿ ಕಾರ್ಯಕೈಗೊಳ್ಳಲು ಸರ್ಕಾರದೊಂದಿಗೆ ಕೈಜೋಡಿಸಿದ್ದು ಇದರಿಂದ ಸರ್ಕಾರಿ ಶಾಲೆಗೆ ಸರ್ಕಾರ ಹಾಗೂ ಇಂಥ ಸಂಸ್ಥೆಗಳಿಂದ ಹೆಚ್ಚಿನ ಸೌಲಭ್ಯ ಸಿಕ್ಕಿದೆ.

ಕಲ್ಯಾಣ ಕರ್ನಾಟಕ ಭಾಗದ 2ಕೋಟಿ ರೂ.ಯಂತೆ ಅನುದಾನ ಹಂಚಿಕೆ ಮಾಡಿ ಶಾಲಾ ಅಭಿವೃದ್ಧಿಗೆ ಬಳಕೆ ಮಾಡಲು ಮುಂದಾಗಲಾಗಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಪ್ರಭಾರ ಬಿಇಒ ವಾಜೀದ್ ಮಾಜೀದ್, ಎಸ್ಡಿಎಂಸಿ ಅಧ್ಯಕ್ಷ ಭೀಮರಡ್ಡಿ, ಬಿಸಿಯೂಟ ಅಧಿಕಾರಿ ಸಾಬಣ್ಣ, ಮುಖ್ಯಶಿಕ್ಷಕ ಮಲ್ಲಪ್ಪ, ಸಹಶಿಕ್ಷಕ ಮಲ್ಲಪ್ಪ ಪ್ರಮುಖರಾದ ನಳಿನಿ, ವಿಠಲ್, ರವೀಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net