ಶಿಕ್ಷಣದಿಂದ ಸಿಗಲಿದೆ ಉತ್ತಮ ಜೀವನ

18-KGL-2,,,
ಕೊಳ್ಳೇಗಾಲ ಪಟ್ಟಣದ ನಂಜಯ್ಯನಕಟ್ಟೆ ಬಡಾವಣೆ ಬಡ ಮಕ್ಕಳಿಗೆ ಮಂಗಳವಾರ ಹರ್ಷ ಹೋಟೆಲ್ ಮಾಲೀಕ ನಟರಾಜಪ್ಪ ಮತ್ತು 17ನೇ ವಾರ್ಡ್ ನಗರಸಭೆ ಸದಸ್ಯ ಶಾಂತರಾಜು ಬಸ್ತೀಪುರ ಪುಸ್ತಕ ವಿತರಣೆ ಮಾಡಿದರು. ಅಜಯ್, ವಸಂತಕುಮಾರಿ, ಶೀಲಾ ಇದ್ದರು.
Published on

ಕೊಳ್ಳೇಗಾಲ: ಪಟ್ಟಣದ ನಂಜಯ್ಯನಕಟ್ಟೆ ಬಡಾವಣೆಯ ಬಡ ಮಕ್ಕಳಿಗೆ ಮಂಗಳವಾರ ಹರ್ಷ ಹೋಟೆಲ್ ಮಾಲೀಕ ನಟರಾಜಪ್ಪ ಮತ್ತು 17ನೇವಾರ್ಡ್ ನಗರಸಭೆ ಸದಸ್ಯ ಶಾಂತರಾಜು ಬಸ್ತೀಪುರ ಪುಸ್ತಕ ವಿತರಣೆ ಮಾಡಿದರು.

ನಗರಸಭೆ ಸದಸ್ಯ ಶಾಂತರಾಜು ಬಸ್ತೀಪುರ ಮಾತನಾಡಿ, ಕಳೆದ 5 ವರ್ಷದಿಂದ ಗೀತಾ ಏಜೆನ್ಸಿ ಮಾಲೀಕ ಉಮೇಶ್ ಹಾಗೂ ಹರ್ಷ ಹೋಟೆಲ್ ಮಾಲೀಕ ನಟರಾಜಪ್ಪ ಅವರೊಟ್ಟಿಗೆ ನಾನು ಸೇರಿ ನಂಜಯ್ಯನ ಕಟ್ಟೆಯ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲಿ ಎಂಬ ಉದ್ದೇಶದಡಿ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮುಂದೆ ಬಡಾವಣೆ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು. ಉತ್ತಮ ಸ್ಥಾನ ಪಡೆಯಬೇಕು. ನಂತರ ಅವರು ಬಡ ಮಕ್ಕಳಿಗೆ ಸಹಾಯ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವನ್ನು ಇಡೀ ಜಗತ್ತಿಗೆ ತೊರಿಸಿದ್ದಾರೆ. ಗೌರವ, ಅಧಿಕಾರ ಹಾಗೂ ಉತ್ತಮ ಜೀವನ ಶಿಕ್ಷಣದಿಂದ ಸಿಗುತ್ತದೆ. ಮಕ್ಕಳು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ನಂಜಯ್ಯನ ಕಟ್ಟೆ ಕ್ಷೇಮಾಭಿವೃದ್ಧಿ ಸಂಘದ ಅಜಯ್, ಬಡಾವಣೆಯ ಶೀಲಾ, ವಸಂತಕುಮಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net