

ಅಥಣಿ: ಮಕ್ಕಳಿಗಿಂತ ಹಿರಿಯರಿಗೆ ಸಂಸ್ಕಾರ ಕಲಿಸುವುದು ಅವಶ್ಯವಾಗಿದ್ದು, ಇದರಿಂದ ಸಮುದಾಯ ಸನ್ಮಾರ್ಗದಲ್ಲಿ ಸಾಗುತ್ತದೆ ಎಂದು ಹಡಪದ ಸಮುದಾಯದ ಜಿಲ್ಲಾಧ್ಯಕ್ಷ ಶಿವಾನಂದ ಹುನ್ನೂರ ಹೇಳಿದರು.
ಖನಗಾಂವ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಹಡಪದ ಸಮುದಾಯದ ಮುಖಂಡರಿಗೆ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಕಾರ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಹಂಸನೂರಿನ ಅಭಿನವ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಡಾ.ಬಿ.ಎಸ್.ನಾವಿ, ಡಾ.ಭೀಮಾಶಂಕರ ಮನಗೂಳಿ, ಮಹೇಶ ತನ್ನಂಗಿ, ಈಶ್ವರಚಂದ್ರ ಬೆಟಗೇರಿ, ಅಪ್ಪಣ್ಣ ಹಡಪದ, ಸಮುದಾಯದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ, ಕಾರ್ಯಾಧ್ಯಕ್ಷ ಬಸವರಾಜ ಹಡಪದ, ಸಂತೋಷ ನಾವಿ, ಆನಂದ ಕುರ್ಲಿ, ಸಾತಗೌಡ ನಾವಿ, ಶಿವಬಸು ಸುಣಧೋಳಿ, ನಾಗಪ್ಪ ಹಡಪದ, ಸಿದ್ದಪ್ಪ ನಾವಲಗಿ, ಸುರೇಶ ಹಡಪದ, ರವಿ ಕೋರಿ, ಅಣ್ಣಪ್ಪ ಕರೋಶಿ, ಮಹಾಂತೇಶ ಹಂಪಣ್ಣವರ, ಬಸವರಾಜ ಹಡಪದ, ಸಂಗಪ್ಪ ಹಡಪದ, ಮಲ್ಲೇಶ ನಾವಿ ಇತರರಿದ್ದರು.