

ಶಿರಸಿ: ಶಿಕ್ಷಣವನ್ನು ಕೇವಲ ಉದ್ಯೋಗದ ದೃಷ್ಟಿಯಿಂದ ಕಲಿಯಬಾರದು. ಜ್ಞಾನ ಪಡೆದುಕೊಳ್ಳಲು ಶಿಕ್ಷಣ ಮಾರ್ಗವಾಗಿದೆ ಎಂದು ಪಂಡಿತ ಸಾರ್ವಜನಿಕ ಆಸ್ಪತ್ರೆ ಶುಶ್ರೂಷಾಧಿಕಾರಿ ಡಾ. ಭವಾನಿ ಭಂಡಾರಿ ಹೇಳಿದರು.
ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭಂಡಾರಿ ಸಮಾಜದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಜಾತ ಜಾವಕರ ಮಾತನಾಡಿ, ಸಮಾಜದ ಮಕ್ಕಳು ಶಿಕ್ಷಣ ಪಡೆದು ಯುಪಿಎಸ್‌ಸಿಯಂತಹ ಪರೀಕ್ಷೆಗಳನ್ನು ಎದುರಿಸಿ ರಾಷ್ಟ್ರದ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಂಕರ ದೇಶಭಂಡಾರಿ, ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ಅರುಣ ಮಣಕೀಕರ ಮಾತನಾಡಿದರು. ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚಿನ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೇ. 70 ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು. ಗೋವಿಂದ ಪೊಳೇಕರ, ನಾರಾಯಣ ದೇಶಭಂಡಾರಿ ಮತ್ತು ಪ್ರೇಮಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ವಿಕಲಾಂಗ ಭರತ ನಾಯಕ ಅವರಿಗೆ ನಗದು ನೀಡಿ ಗೌರವಿಸಲಾಯಿತು. ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಭಟ್ಕಳ ತಾಲೂಕಿನ ಸಮಾಜದ 1 ವರ್ಷದ ಮಗುವಿಗೆ ನಗದು ಸಹಾಯನೀಡಿ ಪುರಸ್ಕರಿಸಲಾಯಿತು.
ಜಿಲ್ಲಾ ಭಂಡಾರಿ ಸಮಾಜ ಗೋವಾ ಅಧ್ಯಕ್ಷ ಶರದ ಪಡವಳಕರ, ಮೋಹನ ಕಿಂದಳಕರ, ಶ್ರೀಧರ ಬೀರಕೋಡಿ, ಗಣೇಶ ದೇಶಭಂಡಾರಿ, ಪ್ರೇಮಾನಂದ ನಾಯ್ಕ, ವಕೀಲ ವಿಠಲ ಭಂಡಾರಿ, ಲತಾ ಭಂಡಾರಕರ ಇತರರಿದ್ದರು.