

ಕಂಪ್ಲಿ: ಸ್ತ್ರೀ ಶಿಕ್ಷಣ ಹೆಚ್ಚಳದಿಂದ ಸಮಾಜದಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ಇದನ್ನೂ ಓದಿ: ಶಿಕ್ಷಣವಿದ್ದರೂ ಸುಧಾರಣೆಗೊಳ್ಳದ ಸಮಾಜ
ಇಲ್ಲಿನ ಬಿಎಸ್‌ವಿ ಶಾಲಾವರಣದಲ್ಲಿ ಆಯೋಜಿಸಿದ್ದ ವಿವೇಕ ಮಂಟಪ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಶತಮಾನಗಳಲ್ಲಿ ಸ್ತ್ರೀ ಶಿಕ್ಷಣ ಇರಲಿಲ್ಲವೆಂದು ಬಡಬಡಿಸುತ್ತಿದ್ದು, ಸದ್ಯ ಸ್ತ್ರೀ ಶಿಕ್ಷಣ ಹೆಚ್ಚಳಗೊಂಡಿದ್ದರೂ ಸಮಾಜ ಸುಧಾರಣೆಗೊಂಡಿಲ್ಲ.
ಬೆಳೆಯುವ ಸಮಾಜದಲ್ಲಿ ಅಲ್ಪಸ್ವಲ್ಪ ಕುಂದುಕೊರತೆಗಳಿರುವುದು ಸಾಮಾನ್ಯ. ಭಾರತ ಇತಿಹಾಸ ರಚಿಸುವಾಗ ಪೂರ್ವಗ್ರಹ ಪೀಡಿತರಾಗಿ ಹೀನಸ್ಥಿತಿಯ ಇತಿಹಾಸ ದಾಖಲಿಸಿದ್ದಾರೆ. ವಿದೇಶಿಗರು ಮಾತ್ರ ಸ್ವರ್ಗವೆಂದು ಬಣ್ಣಿಸಿದ್ದಾರೆ. ಇಂಡಿಯಾ ಕಲಿಯುವ, ಕಲಿಸುವ ರಾಷ್ಟ್ರವಾಗಿದೆ.
ಸರ್ಕಾರಕ್ಕೆ ರಘುವಂಶದ ಆಡಳಿತದ ಇತಿಹಾಸ ಪುಸ್ತಕ ಓದಲು ಕೊಡಬೇಕಿದೆ. ಮದ್ಯ ಕುಡಿಸಿ, ಮತ್ತು ಬರಿಸಿ, ಮತಿಗೆಡಿಸಿ ಅಧಿಕಾರಕ್ಕೆ ಬರುವಂತಾಗಿದೆ ಎಂದು ಬೇಸರ ವ್ಯಕ್ತಡಿಸಿಸಿದರು.
ಕೆ.ಶ್ರೀನಿವಾಸ್ ಭಕ್ತಿಗೀತೆ ಹಾಡಿದರೆ ಡಿ.ಮೌನೇಶ್ ತಬಲಾ ಸಾಥ್ ನೀಡಿದರು. ಪ್ರಮುಖರಾದ ಕಲ್ಗುಡಿ ವಿಶ್ವನಾಥ, ಡಿ.ವಿ.ಸತ್ಯನಾರಾಯಣ, ಎಸ್.ಎಂ.ನಾಗರಾಜ, ಬಿ.ಎಂ.ಪುಷ್ಪಾ, ಅಮರೇಗೌಡ ಚಿಕ್ಕಜಾಯಿಗನೂರು, ಜಿ.ಎಂ.ಸಿದ್ದಯ್ಯ, ಕೆ.ರಂಗಪ್ಪ, ಎಸ್.ಶಾಮಸುಂದರರಾವ್, ಪ್ರಭುದೇವ, ಕಪ್ಪಗಲ್ ಇತರರಿದ್ದರು.