ಶೈಕ್ಷಣಿಕ ಕ್ಷೇತ್ರ ಕುಂಠಿತ: ಸಂಕನೂರು, ಜಿ.ಎಸ್. ಪಾಟೀಲ ಆತಂಕ

20230701_172631
Published on

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಕಳವಳ ವ್ಯಕ್ತಪಡಿಸಿದರು.
ಶನಿವಾರ ಜಿಪಂ ಸಭಾಂಗಣದಲ್ಲಿ ನಡೆದ ತೆಮಾಸಿಕ ಕೆಡಿಪಿ ಸಭೆಯಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳ ಬಗ್ಗೆ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೈಕ್ಷಣಿಕ ಗುಣಮಟ್ಟ ಕುಂಠಿತಗೊಳ್ಳಲು ಕಾರಣಗಳನ್ನು ಹುಡುಕಬೇಕು ಮತ್ತು ವಿದ್ಯಾಥಿರ್ಗಳು ಹಾಗೂ ಶಿಕ್ಷಕರು ಎಲ್ಲಿ ಎಡುವುತ್ತಿದ್ದಾರೆ ಎಂಬುದನ್ನು ಗಮನಿಸಿ ತರಬೇತಿ ನೀಡುವ ವ್ಯವಸ್ಥೆ ಜಾರಿ ಆಗಬೇಕು ಎಂದು ಸೂಚಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಗಳ ಸ್ಥತಿಗತಿ ಕುರಿತು ಜಿ.ಎಸ್. ಪಾಟೀಲ ಬೇಸರ ಬೇಸರ ವ್ಯಕ್ತಪಡಿಸಿದರು.
ಆಯುಕ್ತರ ವಿರುದ್ಧ:
ಗದಗ ನಗರದಲ್ಲಿ ವಾರಕೊಮ್ಮೆ ನೀರು ಪೂರೈಕೆ ಆಗುತ್ತಿರುವ ಕುರಿತು ವಿಧಾನ ಪರಿಷತ್ ಸದಸಯ ಎಸ್.ವಿ, ನೂರು ನಗರಸಭೆ ಆಯುಕ್ತ ರಮೇಶ ಸುಣಗಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರು. ಸಭೆಗೆ ಸುಲ್ಳು ಮಾಹಿತಿ ನೀಡಬೇಡಿ ಎಂದು ತರಾಟೆ ತೆಗೆದುಕೊಂಡ ಅವರು, ಬಡ ಜನರ ಜತೆ ಚೆಲ್ಲಾಟ ಆಡಬೇಡಿ ಎಂದರು. ಈ ಮಧ್ಯ ಪ್ರವೇಶಿಸಿದ ಸಚಿವ ಎಚ್. ಕೆ ಪಾಟೀಲ್, ನಾಳೆಯಿಂದ ಅವಳಿ ನಗರದಲ್ಲಿ ಟ್ಯಾಂಕರ ಮೂಲಕ ನೀರು ಪೂರೈಕೆ ಮಾಡಲು ಸೂಚಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net